ಪುತ್ತೂರು:ಪುರುಷರಕಟ್ಟೆಯಲ್ಲಿ ಮೊಬೈಲ್ ಟವರ್ ಗೆ ಅಳವಡಿಸಲಾಗಿದ್ದ 22 ಬ್ಯಾಟರಿಗಳನ್ನು ಕಳವು ಮಾಡಿದ ಘಟನೆಗೆ ಸಂಬಂಧಿಸಿ ಕೇರಳ ಮೂಲದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಆರೋಪಿ ಇಟ್ಟಿ ಫನಿಕ್ಕರ್ ಎಂಬಾತನನ್ನು ಪೊಲೀಸರು ಪುತ್ತೂರು ಸ್ವಾಗತ ಹೊಟೇಲ್ ಬಳಿಯಿಂದ ಬಂಧಿಸಿದ್ದಾರೆ.ಸೆ.13ರಂದು ಮೊಬೈಲ್ ಟವರ್ ಟಕ್ನಿಷಿಯನ್ ಗೋಪಿನಾಥ್ ಅವರು ಪರಿಶೀಲಿಸಿದಾಗ ಟವರ್ಗೆ ಅಳವಡಿಸಿದ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಟವರ್ ಶೆಲ್ಟರ್ ಬೀಗ ಮುರಿದು ಒಳನುಗ್ಗಿ 22 ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು.ಈ ಕುರಿತು ಮೊಬೈಲ್ ಟವರ್ ಸಂಸ್ಥೆಯ ಸೆಕ್ಯೂರಿಟಿ ಸೂಪರ್ ವೈಸರ್ ದಿನೇಶ್ ಕೆ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ವಿಸ್ ರಿಕ್ಷಾದಲ್ಲೇ ಬ್ಯಾಟರಿ ಸಾಗಾಟ:
ಆರೋಪಿ ಮೊಬೈಲ್ ಟವರ್ ನಿಂದ ಒಂದೇ ಬಾರಿ 21 ಬ್ಯಾಟರಿ ಕಳವು ಮಾಡದೆ ಮೂರು ಬಾರಿ ಕಳವು ಮಾಡಿದ್ದಾರೆ. ಒಮ್ಮೆಗೆ ಕೆಲವು ಬ್ಯಾಟರಿಗಳನ್ನು ಕದ್ದು ಅದನ್ನು ಪುತ್ತೂರಿಗೆ ಬರುತ್ತಿದ್ದ ಸರ್ವಿಸ್ ಆಟೋ ರಿಕ್ಷಾದಲ್ಲೇ ಸಾಗಾಟ ಮಾಡಿದ್ದಾನೆ. ಹಾಗೆ ಮೂರು ಬಾರಿ ಬ್ಯಾಟರಿ ಸಾಗಾಟದಲ್ಲಿ ಯಶಸ್ವಿಯಾದ ಆರೋಪಿ ಸಿಸಿ ಕ್ಯಾಮರಾ ಆಧಾರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳವಾದ ಬ್ಯಾಟರಿಗಳ ಪೈಕಿ 8 ಬ್ಯಾಟರಿಗಳನ್ನು ಪೊಲೀಸರು ಆರೋಪಿಯಿಂದ ವರಕ್ಕೆ ಪಡೆದುಕೊಂಡಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.