ಉಪ್ಪಿನಂಗಡಿ: ಇಲ್ಲಿನ ಉದ್ಯಮಿ, ಪಾರಿಜಾತ ಗ್ರೂಪ್ಸ್ನ ಮಾಲಕ ಎಂ. ಜೀವನ್ ಕುಮಾರ್ (65) ಅಲ್ಪ ಕಾಲದ ಅನಾರೋಗ್ಯದಿಂದ ಸೆ.17ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಾರಿಜಾತ ಹೋಟೇಲ್, ಪಾರಿಜಾತ ಶಾಮಿಯಾನ , ಪಾರಿಜಾತ ಕಾಂಪ್ಲೆಕ್ಸ್ ಇದರ ಮಾಲಕರಾಗಿರುವ ಇವರು, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಡಾ. ಎಂ.ಎನ್. ಭಟ್, ಡಾ. ಕೆ.ಜಿ. ಭಟ್, ಡಾ. ಯತೀಶ್ ಕುಮಾರ್ ಶೆಟ್ಟಿ, ಡಾ. ರಾಜಾರಾಮ ಕೆ.ಬಿ. ಯು. ರಾಮ , ಜಯವಿಕ್ರಮ್ ಕಲ್ಲಾಪು, ಇಸುಬು ಯು.ಕೆ., ಅಸ್ಕರ್ ಅಲಿ ಮೇದರಬೆಟ್ಟು ಮತ್ತಿತರರು ಭೇಟಿ ಮೃತರ ಅಂತಿಮ ದರ್ಶನ ಪಡೆದರು.