ಕಲಾಭವ ಸರಣಿಯ ಉದ್ಘಾಟನೆಯಲ್ಲಿ ಕಲಾದೀಪ ದಂಪತಿಯಿಂದ ಭರತನಾಟ್ಯ

0

ಪುತ್ತೂರು: ನೃತ್ಯ ತರಬೇತಿ ನೀಡುತ್ತಿರುವ ಸಂಸ್ಥೆಯಾದ ಕಲಾಸೂರ್ಯ ನೃತ್ಯಾಲಯ ಮಂಗಳೂರು ಇದರ ಕಲಾಭವ ಎಂಬ ಸರಣಿ ನೃತ್ಯ ಕಾರ್ಯಕ್ರಮದಲ್ಲಿ ಮೊದಲ ಆವೃತ್ತಿಯಲ್ಲಿ ಪುತ್ತೂರಿನ ಭರತನಾಟ್ಯ ದಂಪತಿ ಕಲಾದೀಪವೆಂದು ಪ್ರಖ್ಯಾತಿಯಾಗಿರುವ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರು ಭರತನಾಟ್ಯ ಪ್ರಸ್ತುತಿ ಮಾಡಿದರು.


ಕಲಾಸೂರ್ಯ ನೃತ್ಯಾಲಯದ ಶಿಕ್ಷಕಿ ಸೌಜನ್ಯ ಪಡ್ವೆಟ್ನಾಯ ಅವರು ಪುತ್ತೂರು ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ. ಮಂಗಳೂರಿನ ಕಾಪಿಕಾಡಿನ ಶ್ರೀರಾಮ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವಾಸದ ಮಾಲಕ ರಮೇಶ ಭಟ್ ಸರವು ಉದ್ಘಾಟಿಸಿದರು.

ಸೌಜನ್ಯಾರವರ ಪತಿ ವಿಕ್ರಂ ಪಡ್ವೆಟ್ನಾಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವಿದ್ಯಾರ್ಥಿನಿ ಕು. ಸ್ನೇಹ ಭಟ್ ಪ್ರಾರ್ಥಿಸಿದರು. ಶಿಕ್ಷಕಿ ವಿ. ಸೌಜನ್ಯ ಪಡ್ವೆಟ್ನಾಯರವರು ಸ್ವಾಗತಿಸಿದರು. ಅಭ್ಯಾಗತರಾದ ಸರವು ರಮೇಶ್ ಭಟ್, ರೇಶ್ಮಾ ಮತ್ತು ಸತ್ಯಶೀಲರವರು ನೃತ್ಯದ ಕುರಿತು ಅಭಿಪ್ರಾಯ ಹಂಚಿಕೊಂಡರು.

LEAVE A REPLY

Please enter your comment!
Please enter your name here