ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.21ರಿಂದ ಅ.2ರ ತನಕ ವಿಜೃಂಭಣೆಯಿಂದ ನಡೆಯಲಿದ್ದು, ಸೀಮೆಯ ಭಕ್ತಾದಿಗಳು ಶ್ರಮದಾನದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ದಾಮೋದರ ಗೌಡ ಕಕ್ವೆ, ಪ್ರವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ, ವಾಸಪ್ಪ ಗೌಡ, ಮೋಹನ ಶರವೂರು, ಪುಷ್ಪಲತಾ ಕೆ, ರೋಹಿಣಿ ಬಿ.ಎನ್ ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ಅಭಿವೃದ್ಧಿ ಸಮಿತಿಯ ಸದಸ್ಯರು, ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರಾದ ಚಂದ್ರದೇವಾಡಿಗ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷರಾದ ನೋಣಯ್ಯ ಕೆದಿಲ, ಆಲಂಕಾರ ಸಮಿತಿಯ ಅಧ್ಯಕ್ಷರಾದ ಗಣರಾಜ್ ಆಲಂಕಾರು, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷರಾದ ಚೆನ್ನಪ್ಪ ಗೌಡ ಶರವೂರು, ಉತ್ಸವ ಸಮಿತಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಪ್ರಭು, ದೇವಸ್ಥಾನದ ಆರ್ಚಕರು, ಸಿಬ್ಬಂದಿ ವರ್ಗ, ಸೀಮೆಯ ಹತ್ತು ಸಮಸ್ತರು, ಭಕ್ತಾದಿಗಳು, ಶ್ರಮದಾನದಲ್ಲಿ ಸಹಕರಿಸಿದರು.