ಪುತ್ತೂರು: ಕುರಿಯ ಶ್ರೀ ವಿಷ್ಣುಮೂರ್ತಿದೇವಾಸ್ಥಾನದಲ್ಲಿ ಸೆ.19 ರಂದು ಸಾರ್ವಜನಿಕ ಮಹಾ ಮೃತ್ಯುಂಜಯ ಹೋಮ, ಮಹಾ ಗಣಪತಿ ಹೋಮ , ಪವಮಾನ ಕಳಸಾಭಿಶೇಕ ಮತ್ತು ಶ್ರೀ ವಿಷ್ಣುಮೂರ್ತಿ ದೇವರಿಗೆ ವಿಶೇಷ ಅಲಂಕಾರ ದೊಂದಿಗೆ ಪೂಜಾ ಕೈಂಕರ್ಯಗಳು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.

ಹೋಮ ಹವನ, ಕಳಸ ಪೂಜಾ ವೈದಿಕ ಕಾರ್ಯಗಳಲ್ಲಿ ಬ್ರಹ್ಮಶ್ರೀ ನಾಗೇಶ ತಂತ್ರಿ ಅವರೊಂದಿಗೆ ವೇದ ಮೂರ್ತಿಗಳಾದ ಲಕ್ಷ್ಮೀಶ ಪುತ್ತೂರಾಯ, ಕೃಷ್ಣ ಬೈಪಡಿತ್ತಾಯ, ಶಚಿನ್ ಬೈಪಡಿತ್ತಾಯ , ರಾಘವೇಂದ್ರ ಬೈಪಡಿತ್ತಾಯ, ಗೋಪಾಲಕೃಷ್ಣ ಹೊಳ್ಳ ,ಮತ್ತು ತೇಜಸ್ ಪೋಳ್ನಾಯರು ಭಾಗವಹಿದ್ದರು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನ 1 ಗಂಟೆಗೆ ವಿಷ್ಣುಮೂರ್ತಿ ದೇವರಿಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗದೊಂದಿಗೆ ಸಂಪನ್ನಗೊಂಡಿತು.
ನಂತರ ಆಶೀರ್ವಚನ ನೀಡಿ ಮಾತನಾಡಿದ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಇತ್ತೀಚೆಗೆ ಪ್ರಶ್ನಾಚಿಂತನೆ ನಡೆಸಿದ ಪ್ರಕಾರವಾಗಿ ಗ್ರಾಮಸ್ಥರು ಸೇರಿದಂತೆ ಊರ ಮತ್ತು ಪರವೂರ ಸಮಸ್ತ ಭಕ್ತಾಧಿಗಳ ದೋಷ ಪರಿಹಾರದ ನಿಮಿತ್ತವಾಗಿ ಸಾರ್ವಜನಿಕ ಮಹಾ ಮೃತ್ಯುಂಜಯ ಹೋಮ, ಗಣಪತಿ ಹೋಮ, ದೇವರಿಗೆ ಕಳಶಾಭಿಷೇಕ ಮತ್ತು ಇನ್ನಿತರ ಪೂಜಾಕಾರ್ಯಗಳು ಶಾಸ್ತ್ರೋಕ್ತವಾಗಿ, ಪ್ರಸನ್ನಕಾಲದಲ್ಲಿ ಇಂದು ನೆರವೇರಿದೆ, ಸಮಸ್ತ ಭಕ್ತಾದಿಗಳ ದೋಷ ಪರಿಹಾರವಾಗಿಲಿ ಮತ್ತು ನಿಮ್ಮೆಲ್ಲರ ಆಶಯಗಳು ಈಡೇರಲಿ ಆ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಂಡು ಶೀಘ್ರದಲ್ಲಿ ದೇವಸ್ಥಾನಲ್ಲಿ ಬ್ರಹ್ಮ ಕಲಶ ವಾಗುವಂತೆ ಶ್ರೀ ವಿಷ್ಣು ಮೂರ್ತಿದೇವರು ಹಾಗೂ ಪರಿವಾರ ದೇವರುಗಳು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮಗಳಲ್ಲಿ ಗ್ರಾಮದ ಹಿರಿಯರು, ಗೌರವ ಅಧ್ಯಕ್ಷರು, ಗೌರವ ಸಲಹೆಗಾರರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳು ಮತ್ತು ಊರ ಹಾಗೂ ಪರವೂರ ಸುಮಾರು 500 ಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿದ್ದರು.