ವಿವೇಕಾನಂದ ಆ.ಮಾ ಶಾಲೆ ತೆಂಕಿಲದ  ವಿದ್ಯಾರ್ಥಿ ಸಮೃಧ್ಧ್ ಆರ್ ಶೆಟ್ಟಿ ಗಣಿತ – ವಿಜ್ಞಾನ ಮೇಳದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ  ಶಿಕ್ಷಾ ಸಂಸ್ಥಾನಂನ ವತಿಯಿಂದ ಆಯೋಜಿಸಲ್ಪಡುವ ಅಖಿಲ ಭಾರತೀಯ ಗಣಿತ-ವಿಜ್ಞಾನ ಮೇಳ 2025 26 ರ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದ ಸ್ಪರ್ಧೆಗಳು ಸೆ.18 ರಿಂದ 20 ರವರೆಗೆ ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ನಡೆದಿದ್ದು,  ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 9ನೇ ತರಗತಿಯ ವಿದ್ಯಾರ್ಥಿ ಸಮೃಧ್ಧ್ ಆರ್ ಶೆಟ್ಟಿ (ಶ್ರೀ ರಾಮಚಂದ್ರ ಮತ್ತು ಶ್ರೀಮತಿ ಶೋಭಾ ದಂಪತಿ ಪುತ್ರ)ಕಿಶೋರವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ‘ವಿದ್ಯುತ್ ಕಾಂತೀಯ ಪರಿಣಾಮಗಳು’ ಎಂಬ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

 ಇವರು ನವೆಂಬರ್ 13 ರಿಂದ 15 ರವರೆಗೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here