
ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಖಮಲೆ- ಅಟಲ್ ನಗರದಲ್ಲಿ 2024-2025 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ ನಿರ್ಮಾಣವಾದ ಬಸ್ಸು ತಂಗುದಾಣವನ್ನು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಉದ್ಘಾಟಿಸಿ ಮಾತನಾಡಿ, ಸುಸಜ್ಜಿತ ಬಸ್ ತಂಗುದಾಣ ಉದ್ಘಾಟನೆಗೊಂಡು ಲೋಕಾರ್ಪಣೆಗೊಂಡಿದೆ.ಈ ಭಾಗದ ಜನರ ಬೇಡಿಕೆ ಈಡೇರಿದೆ.ಇದರ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಕುಂಬ್ರ ಸಿ.ಎ ಬ್ಯಾಂಕ್ ನಿರ್ದೇಶಕ ವಿನೋದ್ ಕುಮಾರ್ ಶೆಟ್ಟಿ ಅರಿಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ನಾರಾಯಣ ನಾಯ್ಕ ಚಾಕೋಟೆ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಭಾರತಿ ವಸಂತ್ ಕೌಡಿಚ್ಚಾರು, ಹೇಮಾವತಿ ಚಾಕೋಟೆ, ಅನಿತಾ ಆಚಾರಿ ಮೂಲೆ, ರೇಣುಕಾ ಸತೀಶ್ ಕರ್ಕೇರಾ ಮಡ್ಯಂಗಳ, ಪಂಚಾಯತ್ ಪಿಡಿಓ ಸುನಿಲ್ ಎಚ್.ಟಿ ,ಕುಂಬ್ರ ಸಿ.ಎ ಬ್ಯಾಂಕ್ ನಿರ್ದೇಶಕ ಸತೀಶ್ ಕರ್ಕೇರಾ ಮಡ್ಯಂಗಳ, ಹಾಜಿ ಇಸುಬು ಶೇಖಮಲೆ, ಪುತ್ತೂರು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞ ಕುಂಞ ಕುಮೇರು,ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸವಿತಾ ಶೇಖಮಲೆ, ಮಾಜಿ ಸದಸ್ಯ ಸುಂದರ ಶೇಖಮಲೆ, ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಯುವರಾಜ್ ಪೂಂಜಾ ಗೋಳ್ತಿಲ, ಪ್ರವೀಣ್ ರೈ ಪನೆಕ್ಕಳ, ಇಬ್ರಾಹಿಂ ಎ.ಆರ್ ಶೇಖಮಲೆ, ಪ್ರಮೋದ್ ರೈ ಪನೆಕ್ಕಳ, ಶರತ್ ಕುಮಾರ್ ಎರ್ಕ, ಹಮೀದ್ ಶೇಖಮಲೆ, ಗಣೇಶ್ ಶೇಖಮಲೆ, ಅಪ್ಪಯ್ಯನಾಯ್ಕ ಬಪ್ಪುಂಡೇಲು, ಹರಿಪ್ರಸಾದ್ ಶೇಖಮಲೆ,ರಾಘವ ಪೂಜಾರಿ ಎರ್ಕ,ನವೀನ್ ಕುರಿಂಜ, ಗುತ್ತಿಗೆದಾರ ತೇಜಸ್,ಮತ್ತೀತರರು ಉಪಸ್ಥಿತರಿದ್ದರು.
ಶ್ರಮದಾನ
ಅರಿಯಡ್ಕ ಗ್ರಾಮ ಪಂಚಾಯತ್,ಸಂಜೀವಿನಿ ಒಕ್ಕೂಟ ಅರಿಯಡ್ಕ ಹಾಗೂ ಊರವರ ಸಹಕಾರದಿಂದ ಸ್ವಚ್ಛತಾ ಕಾರ್ಯ ಶೇಖಮಲೆ ಪರಿಸರದಲ್ಲಿ ನಡೆಯಿತು. ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಸಹಕರಿಸಿದರು. ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾಧರ್ ಕೆ ವಂದಿಸಿದರು.