62.54 ಕೋಟಿ ರೂ. ವ್ಯವಹಾರ, ರೂ. 13.69 ಕೋಟಿ ಸಾಲ ವಿತರಣೆ,
ಶೇ 79.5 ಸಾಲ ವಸೂಲಾತಿ-ಭಾಸ್ಕರ ಎಸ್.ಗೌಡ ಇಚ್ಲಂಪಾಡಿ
ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ(ಪಿಎಲ್ಡಿ) ಬ್ಯಾಂಕ್ 2024-25ನೇ ಸಾಲಿನಲ್ಲಿ 62.54 ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿದೆ. ರೂ. 13.69 ಕೋಟಿ ಸಾಲ ವಿತರಣೆ ಮಾಡಿ ಶೇ 79.5 ಸಾಲ ವಸೂಲಾತಿಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ ಹೇಳಿದರು.
ಸೆ. 20 ರಂದು ಪುತ್ತೂರು ಸಹಕಾರಿ ಟೌನ್ ಬ್ಯಾಂಕಿನ ಸಭಾಂಗಣದಲ್ಲಿ ಜರಗಿದ ಬ್ಯಾಂಕ್ನ 87 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ವಸೂಲಾತಿಯಲ್ಲಿ ದ.ಕ.ಜಿಲ್ಲೆಯ ಪ್ರಾಥಮಿಕ ಬ್ಯಾಂಕ್ಗಳ ಪೈಕಿ ಅತೀ ಹೆಚ್ಚು ಸಾಲ ವಿತರಣೆ ಮಾಡುವ ಬ್ಯಾಂಕ್ ಎಂದು ಗುರುತಿಸಿಕೊಂಡಿರುವುದು ನಮ್ಮ ಸಂಸ್ಥೆಗೆ ಗೌರವವನ್ನು ತಂದಿದೆ ಎಂದು ಹೇಳಿದರು.
ಸಾಲಮನ್ನಾ ಮಾಡಿ- ತಿಲಕ್ ರೈ ಕುತ್ಯಾಡಿ
ಬ್ಯಾಂಕಿನ ಸದಸ್ಯ ತಿಲಕ್ ರೈ ಕುತ್ಯಾಡಿರವರು ಮಾತನಾಡಿ, ಈ ಬಾರಿ ಅಕಾಲಿಕವಾದ ಮಳೆಯಿಂದ ಶೇ 80 ರಷ್ಟು ಅಡಿಕೆ ಕೃಷಿ ಹಾನಿಯಾಗಿದ್ದು, ರೈತರು ತುಂಬಾ ಸಂಕಷ್ಟದಲ್ಲಿ ಇದ್ದಾರೆ. ಒಂದಡೆ ಮಳೆಯಿಂದ ಬೆಳೆಹಾನಿಯಾದರೆ ಇನ್ನೊಂದಡೆ ಕಾಡು ಪ್ರಾಣಿಗಳ ಉಪಟಲದಿಂದ ಕೃಷಿಕನ ಬಾಳು ಆಯೋಮಯವಾಗಿ, ಚಿಂತಾಜನಕವಾದ ಪರಿಸ್ಥಿತಿಯಲ್ಲಿ ಆದುರಿಂದ ರೈತನ ಕೃಷಿ ಸಾಲವನ್ನು ಮನ್ನಾ ಮಾಡುವಂತೆ ಸರಕಾರಕ್ಕೆ ಬರೆದುಕೊಳ್ಳಲು ಈ ಮಹಾಸಭೆಯಲ್ಲಿ ನಿರ್ಣಯವನ್ನು ಮಾಡಬೇಕೆಂದು ಆಗ್ರಹಿಸಿದರು, ಇದಕ್ಕೆ ಉತ್ತರಿಸಿದ ಬ್ಯಾಂಕಿನ ಅಧ್ಯಕ್ಷರು ರೈತರ ಪರಿಸ್ಥಿತಿ ನಮಗೆ ಅರ್ಥವಾಗಿದೆ, ಈ ಬಗ್ಗೆ ನಾವು ಸರಕಾರಕ್ಕೆ ಮನವಿಯನ್ನು ಮಾಡೋಣ ಎಂದರು.
ರೈತರ ಅನುಕೂಲಕ್ಕೆ ವಿಚಾರ ಸಂಕೀರ್ಣ- ಉಮೇಶ್ ಶೆಟ್ಟಿ ಸಾಯಿರಾಮ್
ಬ್ಯಾಂಕಿನ ಸದಸ್ಯ ಉಮೇಶ್ ಶೆಟ್ಟಿ ಸಾಯಿರಾಮ್ರವರು ಮಾತನಾಡಿ ರೈತರ ಅನುಕೂಲಕ್ಕೆ ಆಗುವ ನಿಟ್ಟಿನಲ್ಲಿ ಕೃಷಿ ವಿಚಾರ ಸಂಕೀರ್ಣಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜನೆ ಮಾಡುವಂತೆ ಸಲಹೆಯನ್ನು ನೀಡಿದರು. ಅಗ ಮಾತನಾಡಿದ ಅಧ್ಯಕ್ಷರು ಸದಸ್ಯರುಗಳ ಸಲಹೆಯನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ, ಕ್ರಮಕೈಗೊಳ್ಳುತ್ತೇವೆ ಎಂದರು.
ಕಡಬ ಶಾಖೆಯ ಕಟ್ಟಡದಲ್ಲಿ ಬೇಸಿಗೆ ಕಾಲದಲ್ಲಿ ತುಂಬಾ ಸೆಖೆಯು ಹೆಚ್ಚಾಗಿದೆ, ಇಲ್ಲಿ ಹವಾನಿಯಂತ್ರಿತ ಸೌಲಭ್ಯವನ್ನು ಅಳವಡಿಸುವಂತೆ ಉಮೇಶ್ ಶೆಟ್ಟಿ ಸಲಹೆಯನ್ನು ನೀಡಿದರು, ಈ ಬಗ್ಗೆ ಸಾಧಕ-ಭಾದಕಗಳನ್ನು ಪರಿಶೀಲಿಸಿ, ಮುಂದೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಬ್ಯಾಂಕಿನ ಸದಸ್ಯರುಗಳಾದ ರಾಜಶೇಖರ್ ಜೈನ್, ನಾರಾಯಣ ಪೂಜಾರಿ ಕುರಿಕ್ಕಾರ, ಯಶೋಧರ್ ಜೈನ್, ಚಂದ್ರಹಾಸ್ ರೈ ಡಿಂಬ್ರಿ, ಮೋಹನ್ ಪಕ್ಕಳ ಕುಂಡಾಪು, ಅಬ್ದುಲ್ ಖಾದರ್ ಕರ್ನೂರುರವರುಗಳು ವಿವಿದ ಸಲಹೆ ಸೂಚನೆಯನ್ನು ನೀಡಿದರು.
ಪ್ರತಿಭಾ ಪುರಸ್ಕಾರ :
2024-25ನೇ ಸಾಲಿನ ವರ್ಷದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾವರು -ಎಸ್ಎಸ್ಎಲ್ಸಿಯಲ್ಲಿ ಕೋಡಿಂಬಾಳ ಗ್ರಾಮದ ಯಶೋಧರ್ ಜೈನ್ರವರ ಪುತ್ರ ಆದೀಶ್ ಜೈನ್, ಪಡುವನ್ನೂರು ಗ್ರಾಮದ ಚಂದ್ರಶೇಖರ್ ಕೆ.ಎನ್ರವರ ಪುತ್ರಿ ಜನನಿ, ಕೊಣಾಜೆ ಗ್ರಾಮದ ಚೆನ್ನಪ್ಪ ಗೌಡರವರ ಪುತ್ರ ಪೂರ್ಣೇಶ್, ಬೆಳ್ಳಿಪ್ಪಾಡಿ ಗ್ರಾಮದ ದಾಮೋದರ ಗೌಡರವರ ಪುತ್ರಿ ಜನನಿ, ಕಾಮಣ ಗ್ರಾಮದ ವಸಂತ್ ಗೌಡರವರ ಪುತ್ರ ಸನ್ಮಿತ್, ಚಾರ್ವಕ ಗ್ರಾಮದ ರಾಜೇಶ್ವರಿಯವರ ಪುತ್ರಿ ಶ್ರದ್ಧಾ ಕೆ, ಪಿಯುಸಿ ವಿಭಾಗದಲ್ಲಿ ಮಾಡ್ನೂರು ಗ್ರಾಮದ ನಹುಷರವರ ಪುತ್ರ ಪಿಯೂಷ ಪಿಎನ್, ಕೊಳ್ತಿಗೆ ಗ್ರಾಮದ ಕುಸುಮಾಧರ ಪುತ್ರ ಸುರೇಶ್ ಕೆರವರು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಪೋಷಕರು ಪ್ರತಿಭಾ ಪುರಸ್ಕಾರವನ್ನು ಪಡೆದುಕೊಂಡರು.
ಸನ್ಮಾನ:
ವಿವಿಧ ಕ್ಷೇತ್ರದ ಸಾಧನೆಗೈದ ಬ್ಯಾಂಕಿನ ಸದಸ್ಯರುಗಳಾದ ಉಮೇಶ್ ಸಾಯಿರಾಮ್ ನೂಜಿಬಾಳ್ತಿಲ, ತಿಮ್ಮಪ್ಪ ಗೌಡ ಕೊಳ್ತಿಗೆ, ಕೇಶವ ಭಂಡಾರಿ ಕೋಡಿಂಬಾಡಿ ಹಾಗೂ ಪುನೀತ್ ಕೆಮ್ಮಿಂಜೆರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮೊಳಹಳ್ಳಿ ಶಿವರಾಯ ಪ್ರತಿಮೆಗೆ ಹಾರಾರ್ಪಣೆ:
ಮಹಾಸಭೆ ಆರಂಭವಾಗುವ ಮುನ್ನಾ ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯರವರ ಪ್ರತಿಮೆಗೆ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿರವರು ಹಾರಾರ್ಪಣೆಗೈದು, ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ನಿರ್ದೇಶಕರುಗಳಾದ ಸುಜಾತ ರಂಜನ್ ರೈ, ಯತೀಂದ್ರ ಕೊಚ್ಚಿ, ಸುಂದರ ಪೂಜಾರಿ ಬಡಾವು, ವಿಕ್ರಮ ರೈ ಸಾಂತ್ಯ, ನಾರಾಯಣ ನಾಯ್ಕ, ಚಂದ್ರಾವತಿ ಅಭಿಕಾರ್, ಸ್ವಾತಿ ರೈ, ಕುಶಾಲಪ್ಪ ಗೌಡ ಅನಿಲ, ಬಾಬು ಮುಗೇರ, ಚೆನ್ನಕೇಶವ ಕೆ ಹಾಗೂ ರಾಜುಮೋನ್ ಪಿ.ಆರ್ ಉಪಸ್ಥಿತರಿದ್ದರು.
ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ ಸ್ವಾಗತಿಸಿ, ಕೋಶಾಧಿಕಾರಿ ಯುವರಾಜ ಕೆ.ಪೆರಿಯತ್ತೋಡಿ ವಂದಿಸಿದರು, ಬ್ಯಾಂಕಿನ ವ್ಯವಸ್ಥಾಪಕಿ ಸುಮನ ಎಂ ವರದಿ ವಾಚಿಸಿ, ಮನೋಜ್ ಎ ಪ್ರಾರ್ಥನೆಗೈದು, ಕಾರ್ಯಕ್ರಮ ನಿರೂಪಿಸಿದರು. ಕಡಬ ಶಾಖೆಯ ವ್ಯವಸ್ಥಾಪಕ ಎನ್ ವೇಣು ಭಟ್. ಲೆಕ್ಕಾಧಿಕಾರಿ ವಿನಯಕುಮಾರ್ ಕೆ, ಸಿಬ್ಬಂದಿಗಳಾದ ಆರತಿ ಟಿ.ಕೆ, ಸುರೇಶ್ ಪಿ, ಭರತ್ ಟಿ, ಹರೀಶ್ ಗೌಡ, ವಿಜಯ ಭಟ್ ಎಚ್, ವಿನಯ ಕುಮಾರ್ ಗೌಡ ಬಿ.ಎಸ್, ಶಿವಪ್ರಸಾದ್ ಯು, ಮನೋಜ್ ಕುಮಾರ್ ಹಾಗೂ ಶಿಲ್ಪಾ ಎಚ್ರವರು ಸಹಕರಿಸಿದರು.
ಹೊಸ ಸಾಲವನ್ನು ನೀಡಲಾಗುವುದು,ಸುಸ್ತಿದಾರರ ಬಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ತೆರಳಿ, ಅವರ ಮನ ಒಲಿಸಿ, ಸಾಲವನ್ನು ಮರುಪಾವತಿಸುವಂತೆ ಮಾಡಿ, ಬಳಿಕ ಅವರಿಗೆ ಹೊಸ ಸಾಲವನ್ನು ನೀಡಲಾಗುವುದು.
ಭಾಸ್ಕರ್ ಎಸ್.ಗೌಡ ಇಚ್ಲಂಪಾಡಿ
ಅಧ್ಯಕ್ಷರು- ಪಿಎಲ್ಡಿಬ್ಯಾಂಕ್ ಪುತ್ತೂರು.