ಪುತ್ತೂರು: ಕಬಕ ಗ್ರಾಮದ ಮುಂಗ್ಲಿಮನೆ ನಿವಾಸಿ ವಕೀಲರು ಮತ್ತು ಹವ್ಯಾಸಿ ಛಾಯಾಗ್ರಾಹಕರಾಗಿದ್ದ ತೀರ್ಥಪ್ರಸಾದ್ ಮುಂಗ್ಲಿಮನೆ ಅವರ ಉತ್ತರಕ್ರಿಯೆ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮ ಸೆ.21ರಂದು ಮುರ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ವಕೀಲರು ಮತ್ತು ಒಕ್ಕಲಿಗ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ವಕೀಲ ಸಿದ್ದಿಕ್, ಕಾಣಿಚ್ಚಾರು ಕುಟುಂಬದ ರಾಮಚಂದ್ರ ನುಡಿನಮನ ಸಲ್ಲಿಸಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ವಕೀಲ ಫಜಲ್‌ರಹೀಮ್, ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು ಸಹಿತ ಹಲವಾರು ಮಂದಿ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ತೀರ್ಥಪ್ರಸಾದ್ ಅವರ ಸಹೋದರರಾದ ಕೆಇಎಲ್‌ನ ನಿವೃತ್ತ ಮ್ಯಾನೇಜರ್ ಬಾಲಕೃಷ್ಣ, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಬೆಳ್ಳಾರೆ ರಮ್ಯ ಸ್ಟುಡಿಯೋ ಮಾಲಕ ಜನಾರ್ದನ, ತೆಂಕಿಲ ವಿವೇಕಾನಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ, ಕೃಷಿಕ ಸೋಮಶೇಖರ, ಕಲ್ಲಡ್ಕದಲ್ಲಿ ಮೆಸ್ಕಾಂ ಉದ್ಯೋಗಿಯಾಗಿರುವ ಯುವರಾಜ್, ಮಿತ್ತೂರು ಮೆಸ್ಕಾಂನಲ್ಲಿರುವ ಶಶಿಧರ, ಸಹೋದರಿ ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ರಮಾದೇವಿ, ಕಡಬ ಪಟ್ಟಣ ಪಂಚಾಯತ್‌ನ ಸದಸ್ಯೆ ಲೀಲಾವತಿ ಶಿವರಾಮ್ ಸೇರಿದಂತೆ ಮನೆ ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.