ಪುತ್ತೂರು: ನರಿಮೊಗರು ಗ್ರಾಮದ ಪೇರಡ್ಕ ಸುರೇಶ ಗೌಡರವರ ತೋಟದ ಬಾವಿಗೆ ಬಿದ್ದ ಅವರದೇ ದೊಡ್ಡದಾದ ಜೆರ್ಸಿ ದನವನ್ನು ಪುತ್ತೂರು ಅಗ್ನಿಶಾಮಕದಳದವರು ರಕ್ಷಿಸಿದ ಘಟನೆ ನಡೆದಿದೆ.

ಅಗ್ನಿಶಾಮಕ ದಳದ ಅಧಿಕಾರಿ ಶಂಕರ್, ಸಿಬಂದಿಗಳಾದ ರುಕ್ಮಯ್ಯ, ಕೃಷ್ಣಪ್ಪ, ಸಚಿನ್, ಕುಶಾಲಪ್ಪ, ಮಂಜುನಾಥ ಪಾಟೀಲ್ ಮತ್ತು ವಿನೋದ್ ರಾಠೋಡ್ ಅವರು ಕಾರ್ಯಾಚರಣೆ ನಡೆಸಿದರು. ಸಾರ್ವಜನಿಕರು ಸಹಕಾರ ನೀಡಿದರು.