ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿ ಇವರ ಮಾರ್ಗದರ್ಶನದಲ್ಲಿ ಸೆ.22ರಂದು ಪ್ರಾರಂಭಗೊಂಡು ಸೆ.30 ತನಕ ಶ್ರೀ ಸನ್ನಿಧಿಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಭಜನೆ ಹಾಗೂ ಚೆಂಡೆ ವಾದ್ಯಘೋಷಗಳೊಂದಿಗೆ ಮೆರವಣಿಗೆ ಮೂಲಕ ಮದಕ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ತೆರಳಲಾಯಿತು.

ತದನಂತರ ಶ್ರೀ ಕ್ಷೇತ್ರದಲ್ಲಿ ಸರ್ವಶಕ್ತಿ ಮಹಿಳಾ ಭಜನಾ ಸಂಘ ಪಡುಮಲೆ ಹಾಗೂ ಮಹಾಮ್ಮಯಿ ಮಹಿಳಾ ಭಜನಾ ಸಂಘ ಪಟ್ಟೆ ಇದರ ಸದಸ್ಯರಿಂದ ಭಜನೆ ಹಾಗೂ ವೖೆಧಿಕ ತಂಡದವರಿಂದ ಸಹಸ್ರನಾಮಾದಿ ಪಾರಾಯಣ ನಡೆಯಿತು. ಬಳಿಕ ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜಾ ಪ್ರಸಾದ ವಿತರಣೆ ನಡೆಯಿತು.
ಈ ಸಂಧರ್ಭದಲ್ಲಿ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಉದಯಕುಮಾರ್ ರಾವ್ ಪಡುಮಲೆ, ಶಂಕರಿ ಪಟ್ಟೆ, ಗ್ರಾ.ಪಂ ಸದಸ್ಯರಾದ ಸಂತೋಷ ಆಳ್ವ ಗಿರಿಮನೆ, ಸುಜಾತಾ ಮೖೆಂದನಡ್ಕ, ಶರನ್ನವರಾತ್ರಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶೀಧರ ನಾಯ್ಕ ನೇರ್ಲಂಪ್ಪಾಡಿ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಕಾರ್ಯದರ್ಶಿ ರಾಜೇಶ್ ರೖೆ ಮೇಗಿನಮನೆ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಊರಿನವರು ಭಾಗವಹಿಸಿದ್ದರು.