ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ವತಿಯಿಂದ ಬೆಳ್ತಂಗಡಿ ಗಂಡಿಬಾಗಿಲು ಸಿಯೋನ್ ಆಶ್ರಮ್ ಟ್ರಸ್ಟ್ ನಲ್ಲಿ ನಾಲ್ಕು ದಿನದ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ, ಮಧುಮೇಹ ಮತ್ತು ಚರ್ಮ ರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು.

ಶಿಬಿರದ ಉದ್ಘಾಟನೆಯನ್ನು ಆಶ್ರಮದ ಸಂಸ್ಥಾಪಕರಾದ ಡಾ. ಯು.ಸಿ ಪೌಲೋಸ್, ಡಾ. ಮೇಘನ್ ಶೆಟ್ಟಿ, ಲಯನ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷ ಆಂತೋನಿ ಓಲಿವೆರ, ಕ್ಲಬ್ ಸಂಸ್ಥಾಪಕ ಲಾನ್ಸಿ ಮಸ್ಕರೇನ್ಹಸ್ ರವರು ಚಾಲನೆ ಮಾಡಿ, ಶುಭ ಕೋರಿದರು.
ಎ.ಜೆ ಹಾಸ್ಪಿಟಲ್ ನ ರಿಸರ್ಚ್ ಸೆಂಟರ್ ಮಂಗಳೂರು ಇವರ ಆಶ್ರಯದಲ್ಲಿ ಡಾ. ಮೇಘನ್ ಶೆಟ್ಟಿ ಯವರ ನೇತೃತ್ವದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 18 ವೈದ್ಯರು, 17 ಸಿಬಂದಿಗಳು ತಮ್ಮ ಸೇವೆಯನ್ನು ನೀಡಿದ್ದಾರೆ.
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಕಾರ್ಯದರ್ಶಿ ಲೀನಾ ಮಚಾದೊ, ಸದಸ್ಯರಾದ ಅನಿತಾ ಜ್ಯೋತಿ ಡಿಸೋಜ, ಐವನ್ ಫೆರ್ನಾಂಡಿಸ್, ಲೀನಾ ರೇಗೊ, ಬೆಂಜಮಿನ್ ಡಿಸೋಜರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 400ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನಡೆಯಿತು.