ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಜನಮಾನಸದಲ್ಲಿ ನೆಲೆಯೂರಿರುವ ಸುದ್ದಿ ಸಮೂಹ ಸಂಸ್ಥೆಗಳಿಗೆ ‘ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’ ಲಭಿಸಿದೆ.‘ಸಾಮಾಜಿಕ ಜಾಗೃತಿಯ ಗ್ರಾಮೀಣ ಪತ್ರಿಕೋದ್ಯಮ’ವಿಭಾಗದಲ್ಲಿ ಈ ಪ್ರಶಸ್ತಿ ಒದಗಿ ಬಂದಿದೆ.
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಹಾಗೂ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಹಾಗೂ ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಎಂಆರ್ಪಿಎಲ್ ಮುಖ್ಯ ಪ್ರಾಯೋಜಕತ್ವದಲ್ಲಿ, ಹಳೆಯ ಡಿಸಿ ಕಚೇರಿ ಬಳಿ ಇರುವ ರೆಡ್ ಕ್ರಾಸ್ ಪ್ರೇರಣಾ ಹಾಲ್ನಲ್ಲಿ ಸೆ.20ರಂದು ನಡೆದ ‘ಕೋಸ್ಟಲ್ ಎಂಎಸ್ಎಂಇ ಮತ್ತು ಸ್ಟಾರ್ಟಪ್ ಕಾನ್ಕ್ಲೇವ್-2025’ ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳು ಸೇರಿದಂತೆ ನಾವೀನ್ಯತೆ, ನಾಯಕತ್ವ, ಸಮರ್ಪಣೆ ಮತ್ತು ಬದ್ಧತೆಯ ಮೂಲಕ ಆಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ 29 ಎಂಎಸ್ಎಂಇಗಳನ್ನು ಗುರುತಿಸಿ ಗೌರವಿಸಲಾಯಿತು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರ ಸಮ್ಮುಖದಲ್ಲಿ ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲ್ ಹಾಗೂ ಸುದ್ದಿ ಬಿಡುಗಡೆ ಬೆಳ್ತಂಗಡಿ ಸಿಇಒ ಸಿಂಚನ ಊರುಬೈಲ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪುರಸ್ಕೃತ ಇತರ ಎಂಎಸ್ಎಂಇಗಳು:
‘ರಫ್ತುಗಳಲ್ಲಿ ಶ್ರೇಷ್ಟತೆ’ವಿಭಾಗದಲ್ಲಿ ಎವರೆಸ್ಟ್ ಸೀಫುಡ್ ಪ್ರೈ.ಲಿ.ಕಂಪನಿ ಮತ್ತು ಟೋಲಾರ್ ಓಷನ್ ಪ್ರಾಡಕ್ಟ್ ಪ್ರೈ.ಲಿ., ‘ಅತ್ಯುತ್ತಮ ಹಸಿರು ಉದ್ಯಮ’ಕ್ಕಾಗಿ ಆಪಾವಾಣಿ ಎನ್ವಿರಾನ್ಮೆಂಟಲ್ ಸೊಲ್ಯೂಷನ್ಸ್ ಪೈ.ಲಿ., ‘ಅತ್ಯುತ್ತಮ ನವೀನ ಉದ್ಯಮ(ಸೇವೆ)’ವಿಭಾಗದಲ್ಲಿ ಶಿಪ್ವೇವ್ಸ್ ಆನ್ಲೈನ್ ಲಿ., ‘ಅತ್ಯುತ್ತಮ ಶಿಕ್ಷಣ ಸಂಸ್ಥೆ’ವಿಭಾಗದಲ್ಲಿ ನ್ಯೂ ವೈಬ್ರೆಂಟ್ ಪ್ರಿ-ಯೂನಿವರ್ಸಿಟಿ ಕಾಲೇಜ್, ‘ಅತ್ಯುತ್ತಮ ಉದ್ಯಮಿ(ಸೇವೆ)’ ವಿಭಾಗದಲ್ಲಿ ನಿತ್ಯದಾರ್ ಬ್ಯಾಟರಿ ವರ್ಕ್ಸ್, ‘ಅತ್ಯುತ್ತಮ ನವೀನ ಉದ್ಯಮ(ಉತ್ಪಾದನೆ)’ವಿಭಾಗದಲ್ಲಿ ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಪೈ.ಲಿ., ‘ವರ್ಷದ ಅತ್ಯುತ್ತಮ ಕುಶಲಕರ್ಮಿ’ಯಾಗಿ ಎಜಿ ಜ್ಯುವೆಲ್ಲರಿ ವರ್ಕ್ಸ್, ‘ರೈತರನ್ನು ಸಬಲೀಕರಣಗೊಳಿಸುವ ಅತ್ಯುತ್ತಮ ಕೃಷಿ ವ್ಯವಹಾರ ಉದ್ಯಮ’ವಿಭಾಗದಲ್ಲಿ ಅಂತರ್ರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋ ಲಿ.,‘ವರ್ಷದ ಅತ್ಯುತ್ತಮ ಇನ್ಕ್ಯುಬೇಟರ್ ಸಿಇಒ’ ವಿಭಾಗದಲ್ಲಿ ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್, ‘ಅತ್ಯುತ್ತಮ ಸಾಮಾಜಿಕ ಉದ್ಯಮ’ವಿಭಾಗದಲ್ಲಿ ಭಾರತೀಯ ರೆಡ್ಕ್ರಾಸ್ ಸೊಸೈಟಿ ದ.ಕ.,‘ವರ್ಷದ ಅತ್ಯುತ್ತಮ ಮಹಿಳಾ ಉದ್ಯಮಿ’ವಿಭಾಗದಲ್ಲಿ ದೀಪಾ ಜ್ಯೋತಿ ಎಂಟರ್ಪ್ರೈಸಸ್ ಮತ್ತು ಬಾಲಾಜಿ ಇಂಜಿನಿಯರಿಂಗ್ ಇಂಡಸ್ಟ್ರೀಸ್., ‘ಚಿಲ್ಲರೆ ವ್ಯಾಪಾರದಲ್ಲಿ ಶ್ರೇಷ್ಠತೆ’ ಟೆಕ್ನೋವೋಸ್ ಮೆಷಿನರಿ ಪ್ರೈ.ಲಿ., ‘ವ್ಯವಸ್ಥಾಪಕ ನಿರ್ದೇಶಕ’ ವಿಭಾಗದಲ್ಲಿ ಬ್ರೈಟ್ ಗ್ಲೋಬ್ ಪ್ರೈ.ಲಿ., ‘ಅತ್ಯುತ್ತಮ ಕೃಷಿ ವ್ಯಾಪಾರ ಉದ್ಯಮ’ವಿಭಾಗದಲ್ಲಿ ಮಂಗಲಾ ಕ್ಯಾಶ್ಯೂ ಇಂಡಸ್ಟ್ರೀಸ್., ‘ಸೇವಾ ವಲಯದಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಮಂಜುನಾಥ್ ಕ್ರೇನ್ಸ್, ‘ಲಾಜಿಸ್ಟಿಕ್ ಮತ್ತು ಪೂರೈಕೆ ಸವಕಳಿಯಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಶ್ರೀ ಆದಿನಾಥೇಶ್ವರ ರೋಡ್ಲೈನ್ಸ್., ‘ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಎಸೆಂಟ್ ಹೆಲ್ತ್ಕೇರ್ ಪೈ.ಲಿ.‘ಅತ್ಯುತ್ತಮ ಕುಟುಂಬ ಸ್ವಾಮ್ಯದ ವ್ಯವಹಾರಗಳು’ವಿಭಾಗದಲ್ಲಿ ಶ್ರಥಿ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್ ಪ್ರೈ.ಲಿ. ಮತ್ತು ಕರ್ನಾಟಕ ಏಜೆನ್ಸೀಸ್ಗಳು, ‘ಅತ್ಯುತ್ತಮ ಗ್ರಾಮೀಣ ಉದ್ಯಮ’ಕ್ಷೇತ್ರದಲ್ಲಿ ಚಿತ್ತಾರ ಗೋಡಂಬಿ., ‘ಮಾರ್ಕೆಟಿಂಗ್(ಹಣಕಾಸು ವಲಯ)ನಲ್ಲಿ ಶ್ರೇಷ್ಠತೆ’ವಿಭಾಗದಲ್ಲಿ ಎನ್ಆರ್ಐ ಮನಿ ಕ್ಲಿನಿಕ್., ‘ಅತ್ಯುತ್ತಮ ಉದ್ಯಮ(ಉತ್ಪಾದನೆ)’ವಿಭಾಗದಲ್ಲಿ ಗ್ರೀನ್ಲ್ಯಾಂಡ್ ಟೈಲ್ಸ್ ಲಿ., ‘ಜೀವಮಾನದ ಸಾಧನೆ’ಗಾಗಿ ಲೈಟರ್(ಹಗುರ) ಬುದ್ಧ ಚಲನಚಿತ್ರ, ‘ಸಗಟು ವ್ಯಾಪಾರದಲ್ಲಿ ಶ್ರೇಷ್ಠತೆ’ವಿಭಾಗದಲ್ಲಿ ಶ್ರೀ ಜಗದಂಬಾ ಏಜೆನ್ಸೀಸ್.,‘ವರ್ಷದ ಅತ್ಯುತ್ತಮ ಸಿಇಒ’ ವಿಭಾಗದಲ್ಲಿ ಬ್ರೈಟ್ -ಕ್ಸಿ ಇಂಟರ್ನ್ಯಾಷನಲ್ ಪ್ರೈ.ಲಿ. ಹಾಗೂ ‘ಅತ್ಯುತ್ತಮ ಉದ್ಯಮ(ಸೇವೆಗಳು)’ವಿಭಾಗದಲ್ಲಿ ಅಖಿಲ್ ಅಸೋಸಿಯೇಟ್ಸ್ಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ವಿಶೇಷವಾಗಿ ‘ಸು ಫ್ರಮ್ ಸೋ’ಚಿತ್ರತಂಡಕ್ಕೆ ‘ಜೀವಮಾನ ಸಾಧನಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರದ ಸಹ ನಿರ್ಮಾಪಕ ರವಿ ರೈ ಕಳಸ, ನಿರ್ದೇಶಕ ಜೆ.ಪಿ.ತುಮಿನಾಡು ಹಾಗೂ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು.
ಕರ್ಣಾಟಕ ಬ್ಯಾಂಕಿನ ಸಿಬಿಒ ಚಂದ್ರಶೇಖರ್ ಮಯ್ಯ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ನರಸಿಂಹ ಕುಮಾರ್, ಎಂಆರ್ಪಿಎಲ್ನ ಗ್ರೂಪ್ ಜನರಲ್ ಮ್ಯಾನೇಜರ್(ಮೆಟೀರಿಯಲ್ಸ್)ಡಾ|ಪ್ರಶಾಂತ್ಶಂಕರ್ ಪೊದುವಾಲ್, ಕೆನರಾ ಬ್ಯಾಂಕ್ ಡಿಜಿಎಂ ಶೈಲೇಂದ್ರನಾಥ್ ಶೀತ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಎಸ್ವಿಸಿ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಸೂರಜ್ ಎಸ್ ಶೇಟ್ ಮತ್ತು ಬ್ಯಾಂಕ್ ಆ- ಮಹಾರಾಷ್ಟ್ರದ ವಲಯ ಮುಖ್ಯಸ್ಥ ಸುಚಿತ್ ಡಿ’ಸೋಜರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು MRPLಪ್ರಮುಖ ಪ್ರಾಯೋಜಕರಾಗಿ ಮತ್ತು ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ,SVC ಬ್ಯಾಂಕ್, SIDBI, NMPA,, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು MCC ಬ್ಯಾಂಕ್ ಸಹ-ಪ್ರಾಯೋಜಕರಾಗಿದ್ದು, CAMPCO, Fza Group, SKF Elxer ಮತ್ತು Kaapp Ready ನಂತಹ ಪ್ರಮುಖ ಕಾರ್ಪೊರೇಟ್ಗಳು ಸಹ ಈ ಕಾರ್ಯಕ್ರಮವನ್ನು ಬೆಂಬಲಿಸಿವೆ.
ಕಾನ್ಕ್ಲೇವ್ ನಿರ್ದೇಶಕ ಸಿಎ ಎಸ್.ಎಸ್.ನಾಯಕ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ಯು.ರಾಮ ರಾವ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಮುಖ್ಯ ಸಂಯೋಜಕ ಡಾ.ದೇವದಾಸ್ ರೈ ಮತ್ತು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಕಾರ್ಯದರ್ಶಿ ಪಿ.ರವೀಂದ್ರ ರಾವ್ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವನ್ನು CA ಪ್ರತೀಕ್ಷಾ ಪೈ ಮತ್ತು CA ಯಶಸ್ವಿನಿ ನಿರೂಪಿಸಿದರು.
ಸಾಂಸ್ಕೃತಿಕ ಪ್ರದರ್ಶನ:
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಂದಗೋಕುಲ ನೃತ್ಯ ಅಕಾಡೆಮಿಯ ಶ್ವೇತಾ ಅರೆಹೊಳೆ ಮತ್ತು ತಂಡದಿಂದ ಅನೇಕ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.‘ಸು ಫ್ರಮ್ ಸೋ’ಚಿತ್ರದಲ್ಲಿನ ‘ಬಂದರು ಬಂದರು ಬಾವ ಬಂದರು..’ಹಾಡಿನ ನೃತ್ಯ ಗಮನ ಸೆಳೆಯಿತು.ಬೇರೆಯವರಿಗೆ ನಾವು ರೋಲ್ ಮಾಡೆಲ್ಗಳಾಗಬೇಕು.ಈ ನಿಟ್ಟಿನಲ್ಲಿ 25 ವಲಯಗಳನ್ನು ಗುರುತಿಸಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು.ಅದರಂತೆ 100ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.25 ಕಂಪನಿ ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡುವ ಬದಲು 29 ಕಂಪನಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
-ಸಿಎ ಎಸ್.ಎಸ್.ನಾಯಕ್,ನಿರ್ದೇಶಕರು,ಕಾನ್ಕ್ಲೇವ್