
ಪುತ್ತೂರು: ಡಾ.ಕಿರಣ್ ಕುಮಾರ್ ಗಾನಸಿರಿ ನೇತೃತ್ವದ ಗಾನಸಿರಿ ಕಲಾ ಕೇಂದ್ರ ಈಗಾಗಲೇ 24 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿದ ನಾಡಿನ ಅತೀ ದೊಡ್ಡ ಸುಗಮ ಸಂಗೀತ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಪ್ರಸ್ತುತ ವರ್ಷ ತನ್ನ 12 ಶಾಖೆಗಳಲ್ಲಿ 900 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಅ.2 ವಿಜಯದಶಮಿಯ ದಿನದಂದು ಸಂಸ್ಥೆಯಲ್ಲಿ ಶಾರದಾ ಪೂಜೆ, ವಿದ್ಯಾರ್ಥಿಗಳಿಂದ ಸಂಗೀತ ಸೇವೆ, ಗುರುವಂದನೆ ಮತ್ತು ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಬಲು ದೊಡ್ಡ ಹೆಸರು ಮಾಡಿರುವ ಸಂಸ್ಥೆಯಲ್ಲಿ ಗಾಯನ ತರಬೇತಿ ಮಾತ್ರವಲ್ಲದೆ ತಬಲಾ, ಕೊಳಲು, ಡ್ರಾಯಿಂಗ್, ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆ ತರಗತಿಗಳು ನಡೆಯುತ್ತಿದ್ದು, ಹೊಸದಾಗಿ ಸೇರುವ ವಿದ್ಯಾರ್ಥಿಗಳು ಈ ದಿನ ಸಂಸ್ಥೆಗೆ ಬಂದು ವಿಜಯದಶಮಿ ಪವಿತ್ರ ದಿನ ವಿಶೇಷ ಸಂಗೀತ ಸೇವೆಯಲ್ಲಿ ಪಾಲ್ಗೊಂಡು, ಗುರುವಂದನೆಯನ್ನು ಸಲ್ಲಿಸಿ ಸಂಸ್ಥೆಗೆ ದಾಖಲಾತಿ ಮಾಡಿಕೊಳ್ಳಬಹುದು. ವಿವರಗಳಿಗಾಗಿ 9901555893 ಸಂಖ್ಯೆಗೆ ಕರೆ ಮಾಡಿ.