ಪುತ್ತೂರು: ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸ್, ನೆಹರುನಗರ, ಪುತ್ತೂರು ಸಂಸ್ಥೆಯಲ್ಲಿ ಸೆಪ್ಟೆಂಬರ್ 25 ರಂದು ವಿಶ್ವ ಫಾರ್ಮಸಿಸ್ಟ್ ದಿನವನ್ನು ಆಚರಿಸಲಾಯಿತು. “ಥಿಂಕ್ ಹೆಲ್ತ್, ಥಿಂಕ್ ಫಾರ್ಮಸಿಸ್ಟ್” ಎಂಬ ವಿಷಯಾಧಾರಿತವಾಗಿ ಸೆಮಿನಾರ್ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ. ರಾಧ ಭಾಗವಹಿಸಿ ಫಾರ್ಮಸಿಸ್ಟ್ ವೃತ್ತಿಯ ಮಹತ್ವವನ್ನು ಪ್ರತಿಪಾದಿಸಿದರು. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ್ ಫಾರ್ಮಸ್ಯೂಟಿಕಲ್ ಸೈನ್ಸ್ ಕಾಲೇಜಿನ ಫಾರ್ಮಕಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅನೂಪ್ ಕಿಶೋರ್ ಅವರು “ಫಾರ್ಮಸಿಸ್ಟ್ – ಹೀಲಿಂಗ್ ಬಿಯಾಂಡ್ ಮೆಡಿಸಿನ್” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಅವರು “ಫಾರ್ಮಸಿಸ್ಟ್ ಕೇವಲ ಔಷಧ ವಿತರಕರಷ್ಟೇ ಅಲ್ಲ, ಸಮಾಜದಲ್ಲಿ ಆರೋಗ್ಯ ಸೇವೆಯ ಪ್ರಮುಖ ಅಂಗ” ಎಂದು ತಿಳಿಸಿದರು. ರೋಗಿಗಳಿಗೆ ಔಷಧಿಯ ಬಗ್ಗೆ ಮಾಹಿತಿ ಕೊಡುವುದರಲ್ಲಿ ಫಾರ್ಮಸಿಸ್ಟ್ ಪಾತ್ರ ಅತಿ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಎಂ. ಪಿ. ಸ್ವಾಗತಿಸಿದರು. ಕಾಲೇಜಿನ ಪ್ರಾಧ್ಯಾಪಕಿ ಸಂಧ್ಯಾ ಮತ್ತು ವಿದ್ಯಾ ನಿರೂಪಿಸಿದರು. ಶಂತನು ಕಾಮತ್ ವಂದಿಸಿದರು.