ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧೀನದಲ್ಲಿ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಭಕ್ತಕೋಡಿ ಶಾಖಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಸೆ.25ರಂದು ನಡೆಯಿತು.ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ಅರ್ಚಕರಾದ ಸುಧಿಂದ್ರ ಅಡಿಗ ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮುಂಡೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ, ನಿರ್ದೇಶಕರಾದ ಎಸ್.ಡಿ ವಸಂತ, ಶಿವನಾಥ ರೈ ಮೇಗಿನಗುತ್ತು, ವಸಂತ ಬಿ.ಎನ್, ಸುಧೀರ್ಕೃಷ್ಣ ಎಂ ಪಡ್ಡಿಲ್ಲಾಯ, ಪದ್ಮಯ್ಯ ಪಿ, ಆನಂದ ಪೂಜಾರಿ ಕೆ, ಕೊರಗಪ್ಪ ಸೊರಕೆ, ಶರಣ್ ರೈ ಮೇಗಿನಗುತ್ತು, ನಯನಾ ಗಣೇಶ್ ಸಾಲ್ಯಾನ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಪ್ರತಿನಿಧಿ ಶರತ್ ಡಿ, ಗುತ್ತಿಗೆದಾರ ಅರುಣ್, ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ, ಸದಸ್ಯರಾದ ಕಮಲೇಶ್ ಎಸ್.ವಿ, ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ನೇರೋಳ್ತಡ್ಕ, ಮುಂಡೂರು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಮೋಹನ್ ರೈ ನರಿಮೊಗರು, ಜೀವ ವಿಮಾ ಸಲಹೆಗಾರ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ,
ನಿವೃತ್ತ ಶಿಕ್ಷಕರಾದ ಗುರುರಾಜ್ ಭಟ್, ಮಹಾಬಲ ರೈ ಬೊಟ್ಯಾಡಿ, ನ್ಯಾಯವಾದಿ ಚಂದ್ರ ಭಕ್ತಕೋಡಿ, ಪ್ರಮುಖರಾದ ಇಬ್ರಾಹಿಂ ಮುಲಾರ್, ಸುಬ್ರಹ್ಮಣ್ಯ ಕರುಂಬಾರು, ಸುಪ್ರೀತ್ ಕಣ್ಣಾರಾಯ ಬನೇರಿ,, ಅಶೋಕ್ ರೈ ಸೊರಕೆ, ಪ್ರವೀಣ್ ಆಚಾರ್ಯ ನರಿಮೊಗರು, ಎಸ್.ಎಂ ಶರೀಫ್ ಸರ್ವೆ, ಹಂಝ ಎಲಿಯ, ರಾಮಚಂದ್ರ ಸೊರಕೆ, ಝೈನುದ್ದೀನ್ ಹಾಜಿ ಜೆ.ಎಸ್, ಪ್ರಫುಲ್ಲನಾಥ ರೈ ಭಕ್ತಕೋಡಿ, ಸುರೇಶ್ ಕಣ್ಣಾರಾಯ, ಪ್ರಸಾದ್ ರೈ ಸೊರಕೆ, ಅಬೂಬಕ್ಕರ್ ಹಾಜಿ ಅಲೇಕಿ, ಅಶೋಕ ಎಸ್.ಡಿ, ರಮೇಶ್ ಗೌಡ ಪಜಿಮಣ್ಣು, ಇಸಾಕ್ ಎಸ್ಪಿಟಿ, ಸುರೇಶ್ ಸರ್ವೆ, ಸದಾಶಿವ ಶೆಟ್ಟಿ ಪಟ್ಟೆ, ರಹೀಂ ರೆಂಜಲಾಡಿ, ಅಝೀಝ್ ರೆಂಜಲಾಡಿ, ಹುಸೈನ್ ರೆಂಜಲಾಡಿ, ವಿಶ್ವನಾಥ ಶೆಟ್ಟಿ, ಹಮೀದ್ ನೇರೋಳ್ತಡ್ಕ, ಗಣೇಶ್ ನೇರೋಳ್ತಡ್ಕ, ವಾಸುದೇವ ಸಾಲ್ಯಾನ್, ಮಹಮ್ಮದ್ ಕೆಜಿಎನ್, ಬೊಗ್ಗ ಮೊಗೇರ, ಬಿ.ಡಿ ದಿನೇಶ್, ಬಾಳಪ್ಪ ಕಲ್ಲಗುಡ್ಡೆ, ಮಹಾಲಿಂಗ ಭಂಡಾರಿ, ಅಬ್ಬಾಸ್ ಅಲೇಕಿ, ಚಿದಾನಂದ ಆಚಾರ್ಯ ರೆಂಜಲಾಡಿ, ಚಂದ್ರಹಾಸ ಬೊಟ್ಯಾಡಿ, ನಾಗೇಶ್ ಪಟ್ಟೆಮಜಲು, ರಝಾಕ್ ಬಡಕ್ಕೋಡಿ, ದಯಾನಂದ ಕಡ್ಯ, ಮುಂಡೂರು ಪ್ರಾ.ಕೃ.ಪಸ.ಸಂಘದ ಸಿಬ್ಬಂದಿಗಳಾದ ವತ್ಸಲಾ ಎಸ್, ಗಣೇಶ್ ಪಜಿಮಣ್ಣು, ರಿತೇಶ್ ರೈ, ಮೋಹನ ನಾಯ್ಕ, ಲಿಂಗಪ್ಪ ನಾಯ್ಕ, ಗಣೇಶ್ ಪಿ ಸಾಲ್ಯಾನ್ ಸೇರಿದಂತೆ ಹಲವಾರು ಮಂದಿ ಸಾರ್ವಜನಿಕರು ಉಪಸ್ಥಿತರಿದ್ದರು.