ವಳಚ್ಚಿಲ್ ನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- 8 ಪ್ರಶಸ್ತಿಗಳೊಂದಿಗೆ ಟಾಪ್ 5 ಸಾಧನೆ

0

ಪುತ್ತೂರು: ಸೆ.17ರಿಂದ 19 ವರೆಗೆ ಶಿಮ್ಲಾದ ಈಸ್ಟ್ ಬೋರ್ನ್ ರೆಸಾರ್ಟ್ ನಲ್ಲಿ ನಡೆದ ರಾಷ್ಟ್ರಮಟ್ಟದ NextGen Skill Conclave 2025ರ ಸಮಾವೇಶದಲ್ಲಿ ಕೌಶಲ್ಯಾಭಿವೃದ್ಧಿ, ಕೃತಕ ಬುದ್ಧಿಮತ್ತೆ ಹಾಗೂ ಕೈಗಾರಿಕಾ ಹೊಂದಾಣಿಕೆಯ ಶಿಕ್ಷಣದ ಇತ್ತೀಚಿನ ಪ್ರವೃತ್ತಿಗಳ ಕುರಿತು ಚರ್ಚಿಸಲು ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಕೈಗಾರಿಕಾ ತಜ್ಞರು ಹಾಗೂ ನೀತಿ ನಿರ್ಧಾರಕರು ಭಾಗವಹಿಸಿದ್ದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ವಳಚ್ಚಿಲ್ ನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು‌ ದೇಶದಲ್ಲಿ ಟಾಪ್ 5 ಸಾಧನೆ ಮಾಡಿದೆ.

ಎಡುಸ್ಕಿಲ್ ಮತ್ತು AICTE ನವದೆಹಲಿ ಇದರ ಸಹಯೋಗದಲ್ಲಿ ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶಿವಪ್ರತಾಪ ಶುಕ್ಲ, ಅಧ್ಯಕ್ಷರು, ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯ(SAU) ಸಾರ್ಕ್ ಇದರ ಅಧ್ಯಕ್ಷ ಪ್ರೊ.ಕೆ.ಕೆ.ಅಗರ್ವಾಲ್, AI & CCO, AICTE ಇದರ ಸಿಇಒ ಅನುವಾದಿನಿ ಡಾ.ಬುದ್ಧ ಚಂದ್ರಶೇಖರ್, ನಟ ಮತ್ತು ಪ್ರೇರಣದಾಯಕ ಭಾಷಣಗಾರ ಆಶಿಶ್ ವಿದ್ಯಾರ್ಥಿ, ಎಜುಸ್ಕಿಲ್ಸ್ ಇದರ ಸ್ಥಾಪಕರು ಮತ್ತು ಸಿಇಒ ಡಾ.ಶುಭಜಿತ್ ಜಗದೇವ್ ಉಪಸ್ಥಿತಿಯಲ್ಲಿ 2025ರ ಪ್ರಶಸ್ತಿಗಳನ್ನು ಪಡೆದುಕೊಂಡ ಕರ್ನಾಟಕ ರಾಜ್ಯದ ಏಕೈಕ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂಬ ಗರಿಮೆಗೆ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾತ್ರವಾಗಿದೆ.


ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಆಡಳಿತಾತ್ಮಕವಾಗಿ, ಭೌತಿಕವಾಗಿ ಗುರುತಿಸಿಕೊಂಡ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ವಿಶೇಷ ಸೌಲಭ್ಯಗಳೊಂದಿಗೆ ತರಬೇತಿ, ಪರಿಣತ ಪ್ರಾಧ್ಯಾಪಕ ವರ್ಗದ ಶ್ರಮದ ಪ್ರತಿಫಲವಾಗಿ ಉನ್ನತ ಸಾಧಕ ವಿದ್ಯಾರ್ಥಿಗಳನ್ನು ವರ್ಷವಾರು ಸಮಾಜಕ್ಕೆ ನೀಡುತ್ತಿದ್ದು,ಶೇ. 90ರಷ್ಟು ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಲು ಸಾಧ್ಯವಾಗಿದೆ. ಪ್ರಸ್ತುತ ಅಭಿವೃದ್ಧಿಶೀಲ ಯುಗದಲ್ಲಿ ವಿದ್ಯಾರ್ಥಿಗಳಿಗೆ ನಾವೀನ್ಯತೆ ಹಾಗೂ ಕೌಶಲಾಭಿವೃದ್ಧಿಯ ಅಗತ್ಯತೆಯನ್ನು ಮನಗಂಡು AICTE ಸಹಯೋಗದೊಂದಿಗೆ ಸಂಸ್ಥೆಯು ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಸಾಧನೆಗಾಗಿ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅತ್ಯುತ್ತಮ ಪ್ರದರ್ಶನ ನೀಡಿದ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ -2025, ಅತ್ಯುತ್ತಮ ಪ್ರದರ್ಶನ ನೀಡಿದ ಕೋರ್ಡಿನೇಟರ್ – 2025, ಅತ್ಯುತ್ತಮ ಪ್ರದರ್ಶನ ನೀಡಿದ ಸೆಂಟರ್ ಆಫ್ ಎಕ್ಸಲೆನ್ಸ್-2025, AI ಸ್ಕಿಲ್ಲಿಂಗ್ ಎಕ್ಸಲೆನ್ಸ್ ಪ್ರಶಸ್ತಿ-2025, ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ-Celonis domain, ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ -Microchip domain, ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ – Zscalar domain, ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ – Wadhwani domain ಎಂಟು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಹಲವು ವಿಭಾಗಗಳ ರಾಷ್ಟ್ರೀಯ ಮಟ್ಟದಲ್ಲಿ ಟಾಪ್ 5 ಸ್ಥಾನವನ್ನು ಪಡೆದಿದೆ.

ಇದೇ ವೇಳೆ ಮೈಕ್ರೋಚಿಪ್ ಟೆಕ್ನಾಲಜಿ ಇನ್ ಇದರ ಅಸೋಸಿಯೇಟ್ ಡೈರೆಕ್ಟರ್ ಅಕ್ರಮ್ ಪಾಷಾ ಅವರಿಂದ Artificial intelligence: bridgeing innovation and application in academy and industry ವಿಷಯದ ಬಗ್ಗೆ, Juniper networks ನ ವೈಸ್ ಪ್ರೆಸಿಡೆಂಟ್ ಆಫ್ ಇಂಜಿನಿಯರಿಂಗ್ ರಾಜ್ ಪಗಕು ಇವರಿಂದ From reactive to proactive:AI leading the security revolution ಎಂಬ ವಿಷಯದ ಬಗ್ಗೆ, JAPAC Adoption lead, Future work force Talent , Google cloud learning services ಇದರ ಪ್ರತ್ಯೂಷಾ ಪುಪ್ಪಾಲ ಇವರಿಂದ Career launchpad: Building the AI-ready work force for tomorrow ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಸೇರಿದಂತೆ ಜಾಗತಿಕ ಸಂಸ್ಥೆಗಳ ಗಣ್ಯರಿಂದ ಎಐ, ಕ್ಲೌಡ್ ಎಡಾಪ್ಶನ್, ಸೈಬರ್ ಸುರಕ್ಷತೆ ಹಾಗೂ ಭವಿಷ್ಯದ ಉದ್ಯೋಗ ಬಲ ಪರಿವರ್ತನೆ ಬಗ್ಗೆ ಕೀ ನೋಟ್ ಸೆಷನ್ ಗಳು ನಡೆದವು.‌ AI in talent acquisition: bias, fairness and smallter hiring ಎಂಬ ವಿಷಯದ ಕುರಿತು, AI ಆಧಾರಿತ ನೇಮಕಾತಿಯ ಭವಿಷ್ಯ ಹಾಗೂ ನೈತಿಕ ಅಂಶಗಳ ಕುರಿತು ಚರ್ಚೆಗಳನ್ನು ನಡೆಸಲಾಯಿತು. ಮುಂದಿನ ಪೀಳಿಗೆಯ ಕೌಶಲ್ಯಗಳು, ಕೈಗಾರಿಕಾ–ಅಕಾಡೆಮಿಕ್ ಸಹಕಾರ ಹಾಗೂ ಭವಿಷ್ಯದ ಸನ್ನದ್ಧ ವೃತ್ತಿಪರರನ್ನು ರೂಪಿಸುವಲ್ಲಿ AI ಯ ಮಹತ್ವವನ್ನು ಒತ್ತಿ ಹೇಳಲಾಯಿತು.

ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಪಡೆದ ಪ್ರಶಸ್ತಿಗಳು ಸದಾ ತಂತ್ರಜ್ಞಾನ ನವೀನತೆ ಹಾಗೂ ಕೈಗಾರಿಕಾ ಅಗತ್ಯಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧರನ್ನಾಗಿಸಲು ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಬಿಂಬಿಸುತ್ತಿದ್ದು, ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ಸಮರ್ಪಣೆಯ ಪ್ರತೀಕವಾಗಿ ಸಂಸ್ಥೆಯು ನೆಕ್ಸ್ಟ್ ಜೆನ್ ಸ್ಕಿಲ್ಸ್ ನ ಪ್ರಮುಖ ಕೇಂದ್ರವನ್ನಾಗಿಸಿದೆ. ಶಿಮ್ಲಾದ ಈ ಸಮಾವೇಶದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಡಾ.ಶ್ರೀನಿವಾಸ ಮಯ್ಯ ಡಿ., ಟ್ರೈನಿಂಗ್ & ಪ್ಲೇಸ್ಮೆಂಟ್ ಆಫೀಸರ್ ಡಾ. ಧೀರಜ್ ಹೆಬ್ರಿ, HOD, CS & BS ಶೈಲೇಶ್ ಶೆಟ್ಟಿ, ಅಸಿಸ್ಟೆಂಟ್ ಟ್ರೈನಿಂಗ್ & ಪ್ಲೇಸ್ಮೆಂಟ್ ಆಫೀಸರ್ ಶಶಾಂಕ್ ಭಾಗವಹಿಸಿದ್ದು, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ. ಎ. ರಾಘವೇಂದ್ರ ರಾವ್, ಸಹಕುಲಾಧಿಪತಿಗಳಾದ ಡಾ.ಎ. ಶ್ರೀನಿವಾಸ ಸಂಸ್ಥೆಯ ಸಾಧನೆಗೆ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here