ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಕೇಳಿರುವ ಮಾಹಿತಿಯನ್ನು ಮುಂಡೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯವರು ತನಗೆ ನೀಡಿಲ್ಲ ಎಂದು ಆರೋಪಿಸಿ ಮುಂಡೂರು ಗ್ರಾಮಸ್ಥ ಸುಪ್ರೀತ್ ಕಣ್ಣಾರಾಯ ಬನೇರಿ ಅವರು ಗ್ರಾ.ಪಂಗೆ ದೂರು ನೀಡಿದ್ದು ನಿರ್ದಿಷ್ಟ ದಿನಾಂಕದೊಳಗೆ ಮಾಹಿತಿ ನೀಡದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾನು ಮುಂಡೂರು ಗ್ರಾಮ ಪಂಚಾಯತ್‌ನಲ್ಲಿ ಪ್ರಸಕ್ತ ಸಾಲಿನಲ್ಲಿ ನಡೆದಿರುವ ಗ್ರಾಮ ಸಭೆಗಳ ಸಂಪೂರ್ಣ ವಿವರ ಕೋರಿ 2025 ಜು.8ರಂದು ಅರ್ಜಿ ಸಲ್ಲಿಸಿದ್ದು, ನನಗೆ ಈವರೆಗೂ ಯಾವುದೇ ಮಾಹಿತಿಯನ್ನು ಗ್ರಾ.ಪಂ ನೀಡಿರುವುದಿಲ್ಲ, ಸೆ.29ರ ಮೊದಲು ನನಗೆ ಮಾಹಿತಿ ನೀಡದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರೂ ಆದ ಸುಪ್ರೀತ್ ಕಣ್ಣಾರಾಯ ಬನೇರಿಯವರು ಮುಂಡೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯವರಿಗೆ ಸೆ.25ರಂದು ಮನವಿ ಸಲ್ಲಿಸಿದ್ದಾರೆ.