ದಸರಾ ಹಬ್ಬ ಸಾಮರಸ್ಯವನ್ನು ಬೆಳೆಸುವ ನಾಡಹಬ್ಬ – ಡಾ.ಶಾಂತಾ ಪುತ್ತೂರು.
ಪುತ್ತೂರು: ದಸರಾ ಹಬ್ಬ ಕನ್ನಡಿಗರ ಸಾಂಸ್ಕೃತಿಕ ಹಬ್ಬ. ಸಾಮರಸ್ಯವನ್ನು ಬೆಳೆಸುವ ಮೂಲಕ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದು ಎಂದು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕಿ ಡಾ.ಶಾಂತಾ ಪುತ್ತೂರು ಹೇಳಿದರು.
ಅವರು ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏರ್ಪಡಿಸಲಾದ ದಸರಾ ಸಾಂಸ್ಕೃತಿಕೋತ್ಸವ-2025ರ ಸಂದರ್ಭದಲ್ಲಿ ಕಾಸರಗೋಡು ದಸರಾ
ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗಝಲ್ ಕವಿ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆ ವಹಿಸಿದ್ದರು.ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಧ್ಯಕ್ಷ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಉದ್ಘಾಟಿಸಿದರು.ಅತಿಥಿಗಳಾಗಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕ ಪತ್ರಕರ್ತ ಶ್ರೀ ಜಯಾನಂದ ಪೆರಾಜೆ, ಕನ್ನಡ ಭವನ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್,ಉಡುಪಿ ಜಿಲ್ಲಾಧ್ಯಕ್ಷೆ ಶೋಭಾ ದಿನೇಶ್ , ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕನ್ನಡ ಭವನದ ಪ್ರಕಾಶಕಿ ಸಂಧ್ಯಾ ರಾಣಿ ಟೀಚರ್,ದೇವರಾಜ ಆಚಾರ್ಯ ಸೂರಂಬೈಲು ಭಾಗವಹಿಸಿದ್ದರು.ಕಾಸರಗೋಡು ಕವಿ ಸಾಧಕ ಪ್ರಶಸ್ತಿ ನೀಡಿ ಹಿರಿಯ ಕವಿಗಳನ್ನು ಗೌರವಿಸಲಾಯಿತು.ಕನ್ನಡ ಭವನ ಸಂಸ್ಥಾಪಕ ದಸರಾ ಉತ್ಸವ ಸಂಯೋಜಕ ಡಾ. ವಾಮನ ರಾವ್ ಬೇಕಲ್ ಪ್ರಾಸ್ತಾವಿಕ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಶ್ರೀ ಹರಿ ಭಟ್ ಪೆಲ್ತಾಜೆ,ಶ್ವೇತಾ ಡಿ.ಬಂಟ್ವಾಳ,ಕುಶಿ ಬಡಗಬೆಳ್ಳೂರು,ಸವಿತಾ ಕರ್ಕೇರಾ ಕಾವೂರು,ಮಲ್ಲಿಕಾ ಪೆರ್ಲ,ಮುಸ್ತಾಫ ಬೆಳ್ಳಾರೆ,ಗಿರೀಶ್ ಪೆರಿಯಡ್ಕ,ಸುಜಿತ್ ಕುಮಾರ್ ಬೇಕೂರು,ರಾಧಾಕೃಷ್ಣ ಭಟ್ ಕುರುಮುಜ್ಜಿ,ಜ್ಯೋತ್ಸ್ನ ಕಡಂದೇಲು,ನಿವೇದಿತಾ ಪ್ರಶಾಂತ್,ಪ್ರಭಾವತಿ ಕೆದಿಲಾಯ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಸ್ವರಚಿತ ಭಕ್ತಿ ಗೀತೆ ವಾಚಿಸಿದರು.
ಪುರುಷೋತ್ತಮ ಭಟ್ ಪುದುಕೋಳಿ, ಗೀತಾ ಎಂ.ಭಟ್ ಉಪಸ್ಥಿತರಿದ್ದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ನಿರೂಪಿಸಿದರು.ವಸಂತ ಕೆರೆಮನೆ ವಂದಿಸಿದರು.