ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಸೆಪ್ಟೆಂಬರ್ 23 ಮತ್ತು 24ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂತೋಷ್ ಕುಮಾರ್ ಹಾಗೂ ರವಿಕಲಾ ದಂಪತಿ ಪುತ್ರಿ, 10ನೇ ತರಗತಿಯ ವಿದ್ಯಾರ್ಥಿನಿ ಲಾಸ್ಯಾ ಸಂತೋಷ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, 1500 ಮೀ. ಓಟದಲ್ಲಿ ಪ್ರಥಮ ಸ್ಥಾನ, ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ ಹಾಗೂ 4×400 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅನಿಲ್ ಕುಮಾರ್ ರೈ ಡಿ. ಹಾಗೂ ಚೈತ್ರ ಎ. ರೈ ದಂಪತಿ ಪುತ್ರಿ, 10ನೇ ತರಗತಿಯ ವಿದ್ಯಾರ್ಥಿನಿ ತನ್ವಿ ಎ. ರೈ 4×400 ಮಿಡ್ಲೆ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಲೋಕನಾಥ್ ಶೆಟ್ಟಿ ಮತ್ತು ದಿವ್ಯ ರೈ.ಪಿ ದಂಪತಿ ಪುತ್ರ 10ನೇ ತರಗತಿಯ ವಿದ್ಯಾರ್ಥಿ ಹಿಮಾಂಶು ಎಲ್. ಶೆಟ್ಟಿ ಈಟಿ ಎಸೆತದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಎನ್. ಕೃಷ್ಣ ನಾಯ್ಕ್ ಮತ್ತು ರಮ್ಯಕೃಷ್ಣ ದಂಪತಿ ಪುತ್ರಿ, 9ನೇ ತರಗತಿಯ ವಿದ್ಯಾರ್ಥಿನಿ ಆರುಷಿ ಎನ್. ಈಟಿ ಎಸೆತದಲ್ಲಿ ಪ್ರಥಮ ಸ್ಥಾನ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದಿ. ಜನಾರ್ದನ ಗೌಡ ಮತ್ತು ಶಾರದ ದಂಪತಿ ಪುತ್ರಿ ಬಿ. ತ್ರಿಷಾ 4೦೦ ಮೀಟರ್ ಅಡೆತಡೆ ಓಟದಲ್ಲಿ (ಹರ್ಡಲ್ಸ್) ದ್ವಿತೀಯ ಸ್ಥಾನ ಮತ್ತು 4 x 400 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸುರೇಶ್ ಗೌಡ ಮತ್ತು ವಿದ್ಯಶ್ರೀ ದಂಪತಿ ಪುತ್ರಿ 9ನೇ ತರಗತಿಯ ದೃಶಾನ ಎಸ್. ಸರಳಿಕಾನ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಮತ್ತು 4×4೦೦ ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮೋಹನ್ ಗೌಡ ಮತ್ತು ಪ್ರಮೀಳಾ ದಂಪತಿ ಪುತ್ರ, ೮ನೇ ತರಗತಿಯ ಆರ್ಯ ಮೋಹನ್ ಎಚ್. ಲಾಂಗ್ ಜಂಪ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಅವಿನಾಶ್ ಮಳಿ ಹಾಗೂ ರಂಜಿತಾ ಅವಿನಾಶ್ ಮಳಿ ದಂಪತಿ ಪುತ್ರಿ ಅನುಶ್ರೀ ಎಂ. ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಮಹೇಶ್ ಶೆಟ್ಟಿ ಮತ್ತು ಸುಕನ್ಯಾ ಕೆ.ಶೆಟ್ಟಿ ದಂಪತಿ ಪುತ್ರ, 7ನೇ ತರಗತಿಯ ದೀಪಾಂಶ್ ಶೆಟ್ಟಿ 600 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
17 ವರ್ಷದೊಳಗಿನ ಬಾಲಕಿಯರ ವಿಭಾಗದ ತಂಡ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಲಾಸ್ಯಾ ಸಂತೋಷ್, ಆರುಷಿ ಎನ್, ಬಿ. ತ್ರಿಷಾ, ಆರ್ಯ ಮೋಹನ್. ಎಚ್ ಹಾಗೂ ದೀಪಾಂಶ್ ಶೆಟ್ಟಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಗೊಂಡಿದ್ದು, ಅಕ್ಟೋಬರ್ 3ರಿಂದ 5ರವರೆಗೆ ಬೆಂಗಳೂರಿನಲ್ಲಿ ಜರುಗಲಿದೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ದೈಹಿಕ ಶಿಕ್ಷಕರಾದ ಸಂತೋಷ್ ಹಾಗೂ ಸುಚಿತ್ರಾ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಿರುತ್ತಾರೆ.