ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗಕ್ಕೆ ಆಯ್ಕೆ

0

ಗೌರವ ಅಧ್ಯಕ್ಷ: ಶರತ್ ರೈ ಓಲ್ತಾಜೆ, ಅಧ್ಯಕ್ಷ: ಲೋಕೇಶ್ ಸ್ವಾಮಿನಗರ, ಪ್ರ.ಕಾರ್ಯದರ್ಶಿ: ಹರೀಶ್ ಮಡಿವಾಳ, ಕೋಶಾಧಿಕಾರಿ: ಗುರುಪ್ರಸಾದ್, ಸಂಘಟಕ: ರಾಜೇಶ್ ಮಯೂರ


ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ 8 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಮಜ್ಜಾರಡ್ಕ ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.

ಸಂಘಟನೆಯ ಗೌರವ ಅಧ್ಯಕ್ಷರಾಗಿ ಶರತ್ ರೈ ಓಲ್ತಾಜೆ ಬೆಂಗಳೂರು, ಅಧ್ಯಕ್ಷರಾಗಿ ಲೋಕೇಶ್ ಸ್ವಾಮಿನಗರ, ಉಪಾಧ್ಯಕ್ಷರಾಗಿ ಸುಜಿತ್ ಶೇಖಮಲೆ, ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಮಡಿವಾಳ ಕೋಡಿಯಡ್ಕ, ಜತೆ ಕಾರ್ಯದರ್ಶಿಯಾಗಿ ಮೋಹನ್ ಬಂಗಾರುಗುಡ್ಡೆ, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಮಜ್ಜಾರ್, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಸ್ವಾಮಿನಗರ, ಜೊತೆ ಕಾರ್ಯದರ್ಶಿಯಾಗಿ ಸುಭಾಸ್ ಕೊಲ್ಲಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನವೀನ್ ಮಜ್ಜಾರ್, ಜೊತೆ ಕಾರ್ಯದರ್ಶಿಯಾಗಿ ಚೇತನ್ ಕೊಡಿಮರರವರುಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗರರಾಗಿ ಕಿಶೋರ್ ಶೆಟ್ಟಿ ಅರಿಯಡ್ಕ, ತಿಮ್ಮಪ್ಪ ಪೂಜಾರಿ ಮಜ್ಜಾರ್, ಮೋಹನ್ ದಾಸ್ ರೈ ಕುಂಬ್ರ, ಲೋಕೇಶ್ ರೈ ಅಮೈ, ಭವಿತ್ ಕುಮಾರ್ ಪಾಲ್ತಾಡಿ, ಜನಾರ್ಧನ ಗೌಡ,ಕಡಮಜಲು, ತಿಲಕ್ ರಾಜ್ ಉಡುಪಿ, ಮನೋಜ್ ರೈಮಾಡಾವು, ಜನಾರ್ಧನ ಪೂಜಾರಿ ಪದಡ್ಕ, ಪಡುಮಲೆ, ಸುನಿಲ್ ರೈ ಪಾಲ್ಗುಣಿ ಬೆಂಗಳೂರು, ಸಂಘಟಕರಾಗಿ ರಾಜೇಶ್ ಕೆ ಮಯೂರ ಗೋಳ್ತಿಲರವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನವಂಬರ್ 2 ರಂದು ನಡೆಯುವ 8 ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮದ ನಡೆಸುವ ಬಗ್ಗೆ ಚರ್ಚೆ ಮಾಡಲಾಯಿತು. ದಿ. ಜಗದೀಶ್ ಕೋಡಿಯಡ್ಕ ಇವರ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಪಲಾನುಭವಿಗೆ ವೀಲ್ ಚಯರ್ ಹಸ್ತಾಂತರ ಹಾಗೂ ಸಂಘಟನೆ ವತಿಯಿಂದ ಅವರ ಮನೆಯ ಬಾವಿಗೆ ರಿಂಗ್ ಅಳವಡಿಸಿದನ್ನು ಮುಂದಿನ ತಿಂಗಳು ಉದ್ಘಾಟನೆ ಕಾರ್ಯಕ್ರಮ ಮಾಡುವುದೆಂದು, ನಂತರ ಸಂಘಟನೆ ವತಿಯಿಂದ ನಿರ್ಮಾಣ ಮಾಡಿದ ವಿಶೇಷ ಚೇತನಾ ಮೋಹನ್ ದರ್ಬೆತ್ತಡ್ಕ ಇವರ ಮನೆಯ ಹಸ್ತಾಂತರ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ನಿಕಟಪೂರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಘಟನೆಯ ಸಂಘಟಕರು ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ ಸ್ವಾಗತಿಸಿ, ವಂದಿಸಿದರು.


ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದವು ಶ್ರಮ, ಸೇವೆ, ಸಹಾಯ ಎಂಬ ದೇಯ್ಯ ವಾಕ್ಯದೊಂದಿಗೆ ಸಮಾಜದ ಅಸಕ್ತ ಜನರಿಗೆ ಎಲ್ಲಾ ರೀತಿಯಲ್ಲಿ ನೆರವು ನೀಡುತ್ತಾ, ರಕ್ತದಾನದ ತುರ್ತು ಅವಶ್ಯಕತೆ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ರಕ್ತದಾನಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸಂಘಟನೆ ನೇತೃತ್ವದಲ್ಲಿ ಮನೆ ಬೆಳಕು ಯೋಜನೆಯಡಿಯಲ್ಲಿ ಒಂದು ಮನೆಯನ್ನು ಕಳೆದ ವರ್ಷ ಹಸ್ತಾಂತರ ಮಾಡಿದ್ದು, ಇನ್ನೊಂದು ಮನೆ ಕೊನೆಯ ಹಂತದಲ್ಲಿ ಇದೆ.

LEAVE A REPLY

Please enter your comment!
Please enter your name here