ಪುತ್ತೂರು: ಇದೇ ಅಕ್ಟೋಬರ್ 5 ಆದಿತ್ಯವಾರದಂದು ಬೆಂಗಳೂರಿನ ಮಣಿಪಾಲ್ ಸೆಂಟರ್ ನಲ್ಲಿ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ವಿಸ್ತೃತ ಶೋರೂಮ್ ಉದ್ಘಾಟನೆ ಖ್ಯಾತ ನಟ ಡಾ| ರಮೇಶ್ ಅರವಿಂದ್ ಅವರಿಂದ ನಡೆಯಲಿದೆ ಎಂದು ಮುಳಿಯ ಚೇರ್ಮನ್ ಕೇಶವ ಪ್ರಸಾದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಎಕನಾಮಿಕ್ ಫೋರಂ , ಜಾಗತಿಕ ಅಧ್ಯಕ್ಷರಾದ ಶ್ರೀ ಸ್ವಾಮಿ ವಿಗ್ಯಾನ್ ಆನಂದ್ ಇವರು ಬೆಳಿಗ್ಗೆ ದೀಪ ಬೆಳಗಿಸಿ ಶೋರೂಮಿಗೆ ಚಾಲನೆ ನೀಡಲಿದ್ದಾರೆ.ಮಧ್ಯಾಹ್ನ 11 ಗಂಟೆಗೆ ಡಾ| ರಮೇಶ್ ಅರವಿಂದ್ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾವಿರ ಗ್ರಾಹಕರನ್ನ ಒಂದೆಡೆ ಸೇರಿಸಿ, ಅವರು ಖರೀದಿ ಮಾಡುವ ಕಾರ್ಯಕ್ರಮವು ನಡೆಯಲಿದೆ. ವಿಶ್ವ ದಾಖಲೆ ಮಾಡುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಬೆಂಗಳೂರಿನ ಈ ಮುಳಿಯ ಶೋರೂಮ್ ನಮ್ಮ ಐದನೇ ಮಳಿಗೆಯಾಗಿದೆ. 81 ವರ್ಷಗಳ ಪರಂಪರೆ ಹೊಂದಿರುವ ಮುಳಿಯ ಈಗ ಮೂರನೇ ತಲೆಮಾರಿನ ನಾನು ಕೇಶವ ಪ್ರಸಾದ್ ಮತ್ತು ತಮ್ಮ ಕೃಷ್ಣ ನಾರಾಯಣ ಮುಳಿಯ ಮುನ್ನಡೆಸುತ್ತಿದ್ದೇವೆ ಎಂದರು. ಈ ವಿಸ್ತೃತ 4000 + ಚದರ ಅಡಿ ವಿಸ್ತೀರ್ಣದ ದೊಡ್ಡ ಶೋ ರೂಮ್ ನಾಳೆ ಅನಾವರಣ ಮಾಡುತ್ತಿದ್ದೇವೆ. ಹಾಗೆಯೇ ವಿಶೇಷ ವಿನ್ಯಾಸದ ಆಭರಣಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ” ಎಂದರು. ಅದೇ ದಿನ ಅಷ್ಟ ಲಕ್ಷ್ಮಿಯರಿಂದ ವಿವಿಧ ಬಗೆಯ ಆಭರಣಗಳು ಅನಾವರಣಗೊಳ್ಳಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಲಹೆಗಾರ ವೇಣು ಶರ್ಮ ಮತ್ತು ಶಾಖಾ ಪ್ರಬಂಧಕರಾದ ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.