ಭೀಮ ಜ್ಯುವೆಲ್ಲರ‍್ಸ್‌ನಿಂದ ಗ್ರ್ಯಾಂಡ್, ಎಕ್ಸ್ ಪೋ & ಸೇಲ್‌ಗೆ ಚಾಲನೆ

0

ಪುತ್ತೂರು: ಚಿನ್ನಾಭರಣಗಳ ಉದ್ಯಮದಲ್ಲಿ ನೂರು ವರ್ಷಗಳ ಇತಿಹಾಸವಿರುವ ಕಾಸರಗೋಡಿನಲ್ಲಿ ಶಾಖೆಯನ್ನು ಹೊಂದಿರುವ ಭೀಮ ಜ್ಯುವೆಲ್ಲರ‍್ಸ್‌ನಿಂದ ಮೂರು ದಿನಗಳ ಕಾಲ ಪುತ್ತೂರಿನ ಅರುಣಾ ಕಲಾ ಮಂದಿರದಲ್ಲಿ ನಡೆಯಲಿರುವ ಗ್ರ್ಯಾಂಡ್ ಎಕ್ಸ್ ಪೋ & ಸೇಲ್‌ ಅ.4ರಂದು ಬೆಳಗ್ಗೆ ಉದ್ಘಾಟನೆಗೊಂಡಿತು.


ಗ್ರ್ಯಾಂಡ್ ಎಕ್ಸ್ ಪೋ & ಸೇಲ್‌ನ್ನು ಉದ್ಘಾಟಿಸಿದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ನೂರು ವರ್ಷಗಳ ಪ್ರಾಮಾಣಿಕ ಹಾಗೂ ವಿಶ್ವಸಾರ್ಹ ಸೇವೆಗೆ ಭೀಮ ಜ್ಯುವೆಲ್ಲರ‍್ಸ್‌ಗೆ ಕಾಸರಗೋಡಿನಲ್ಲಿ ಜನತೆ ಸಹಕಾರ ಹಾಗೂ ಶಕ್ತಿ ನೀಡಿದ್ದಾರೆ. ಪುತ್ತೂರಿನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳೊಂದಿಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಚಿನ್ನಾಭರಣ ಖರೀದಿಸಲಿ ನಿರೀಕ್ಷೆಯಿಟ್ಟವರಿಗೆ ಅನುಕೂಲವಾಗಲಿದೆ. ಇದಕ್ಕೆ ಪುತ್ತೂರಿನ ಜನತೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿಯೂ ಚಿನ್ನಾಭರಣಗಳ ಮಳಿಗೆ ಪ್ರಾರಂಭಿಸುವ ಭಾಗ್ಯ ಕೂಡಿ ಬರಲಿ ಎಂದು ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ವಿಶೇಷ ರಿಯಾಯಿತಿ, ಕಡಿಮೆ ದರ, ವಿಶೇಷ ಕೊಡುಗೆಗಳೊಂದಿಗೆ ಮೂರು ದಿನಗಳ ಕಾಲ ನಡೆಯುವ ಮಾರಾಟ ಮೇಳದ ಮೂಲಕ ಚಿನ್ನಾಭರಣ ಖರೀಸಲು ವಿಶೇಷ ಅವಕಾಶವನ್ನು ಭೀಮಾ ಜ್ಯುವೆಲ್ಲರ‍್ಸ್ ನೀಡಿದ್ದು ಪುತ್ತೂರಿನ ಜನತೆ ಸಹಕರಿಸುವಂತೆ ತಿಳಿಸಿದರು.
ಅರುಣಾ ಕಲಾ ಮಂದಿರದ ಮ್ಹಾಲಕಿ ವಿಜಯ ನಾಯಕ್ ಮಾತನಾಡಿ, ನಾರಿಯರಿಗೆ ಸೀರೆಯಷ್ಟೇ ಚಿನ್ನಾಭರಣಗಳು ಮೇರುಗು ನೀಡುತ್ತಿದೆ. ವಿಶೇಷ ರಿಯಾಯಿತಿ ನೀಡುವ ಮೂಲಕ ಬೀಮಾ ಜ್ಯವೆಲ್ಲರ‍್ಸ್ ದೀಪಾವಳಿಯ ಹಬ್ಬಕ್ಕೆ ಮನೆ, ಮನ ತುಂಬಲ ಸಹಕಾರಿಯಾಗಲಿದೆ ಎಂದರು.


ಕಾಸರಗೋಡು ಶಾಖಾ ವ್ಯವಸ್ಥಾಪಕ ಅಮರನಾಥ್, ಮಾರ್ಕೆಟಿಂಗ್ ಮ್ಯಾನೇಜರ್ ಗಳಾದ ಅನೀಶ್, ಶ್ರೀಜಿತ್, ಫ್ಲೋರ್ ಮ್ಯಾನೇಜರ್ ಸುಧೀಶ್, ಪ್ರೊಡೆಕ್ಷನ್ ಮ್ಯಾನೇಜರ್ ರಾಕೇಶ್, ಸೂಪರ್‌ವೈಸರ್ ಗಳಾದ ಗಣೇಶ್, ಮನೋಜ್, ರಾಕೇಶ್ ಉಪಸ್ಥಿತರಿದ್ದರು,


ಎಕ್ಸ್ ಪೋ & ಸೇಲ್‌ನಲ್ಲಿ ಏನೇನಿದೆ….!
ಎಕ್ಸ್ ಪೋ & ಸೇಲ್‌ನಲ್ಲಿ ವೇಳೆ ಚಿನ್ನಾಭರಣ ಖರೀದಿಗೆ ತಯಾರಿಕಾ ಶುಲ್ಕದ ಮೇಲೆ 50% ವರೆಗೆ ರಿಯಾಯಿತಿ, ಪ್ರತಿ ಕ್ಯಾರೆಟ್ ವಜ್ರದ ಮೇಲೆ ರೂ.15,೦೦೦ವರೆಗೆ ರಿಯಾಯಿತಿ ದೊರೆಯಲಿದೆ. ಚಿನ್ನದ ಆಭರಣಗಳ ತಯಾರಿಕಾ ಶುಲ್ಕ 1% ನಿಂದ ಆರಂಭಗೊಳ್ಳಲಿದೆ. ಹಳೆ ಚಿನ್ನಾಭರಣ ಮಾರಾಟ ಮಾಡುವಾಗ 125ರೂ ಅಧಿಕ ಪಡೆಯಬಹುದು. ಆಯ್ದ ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳ ತಯಾರಿಕಾ ಶುಲ್ಕ ೦% ಆಗಿರುತ್ತದೆ. ವಿಶೇಷ ಮುಂಗಡ ಬುಕ್ಕಿಂಗ್ ಸೌಲಭ್ಯವೂ ಸ್ಥಳದಲ್ಲಿ ಲಭ್ಯವಿದೆ. ಪ್ರತಿ ಖರೀದಿಯ ಮೇಲೂ ಗ್ರಾಹಕರಿಗೆ ಖಚಿತ ಉಡುಗೊರೆ ಲಭಿಸಲಿದೆ. ಎಕ್ಸ್ ಪೋ ಸಂದರ್ಭದಲ್ಲಿ ಬರುವ ಗ್ರಾಹಕರಿಗೆ ವಿಸಿಟ್ & ವಿನ್ ಕೂಪನ್ ಲಭ್ಯವಿದ್ದು, ಲಕ್ಕಿ ಡ್ರಾ ಮೂಲಕ ಬಹುಮಾನಗಳನ್ನು ಗೆಲ್ಲುವ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here