ಪುತ್ತೂರು: ಇತ್ತೀಚೆಗೆ ನಿಧನರಾದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯ ಬಳಿಯ ನಿವಾಸಿ, ಮಾಜಿ ಪುರಸಭಾ ಸದಸ್ಯ ಪಾಂಡುರಂಗ ಹೆಗ್ಡೆಯವರ ಧರ್ಮಪತ್ನಿ ಚಂದ್ರಕಲಾ ಹೆಗ್ಡೆ ಯವರ ಶ್ರದ್ಧಾಂಜಲಿ ಅರ್ಪಣೆ ಹಾಗೂ ಉತ್ತರಕ್ರಿಯೆ ಕಾರ್ಯಕ್ರಮವು ಅ.4ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಚಿದಾನಂದ ಹೆಗ್ಡೆ ಮೃತರ ಗುಣಗಾನ ಮಾಡಿ, ಶ್ರದ್ಧಾಂಜಲಿ ಅರ್ಪಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಕೂಡ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಪತಿ ಪಾಂಡುರಂಗ ಹೆಗ್ಡೆ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪುತ್ರರಾದ ನರೇಶ್ ಹೆಗ್ಡೆ ಹಾಗೂ ಸೊಸೆ ಆಶಾ ನರೇಶ್, ಇನ್ನೋರ್ವ ಪುತ್ರ ಯತೀಶ್ ಹೆಗ್ಡೆ ಹಾಗೂ ಸೊಸೆ ದೀಪಾ ಯತೀಶ್, ಮಗಳು ಶ್ವೇತ ಹೆಗ್ಡೆ ಮತ್ತು ಅಳಿಯ ರಾಜೇಶ್ ಸಹಿತ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಮೊಮ್ಮಕ್ಕಳು ಹಾಜರಿದ್ದರು.