ಗೌರವಾಧ್ಯಕ್ಷ: ಅಬ್ದುಲ್ ರಹಿಮಾನ್ ಹಾಜಿ, ಅಧ್ಯಕ್ಷ: ಅಶ್ರಫ್ ಸಾರೆಪುಣಿ, ಪ್ರ.ಕಾರ್ಯದರ್ಶಿ: ಉದಯ ಮಡಿವಾಳ
ಪುತ್ತೂರು: ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ ಕುಂಬ್ರ ಇದರ ವಾರ್ಷಿಕ ಮಹಾಸಭೆ ಕುಂಬ್ರ ರೈತ ಸಭಾಭವನದಲ್ಲಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2024-25ನೇ ಸಾಲಿನ ಲೆಕ್ಕ ಪತ್ರವನ್ನು ಉದಯ ಮಡಿವಾಳ ಮಂಡಿಸಿದರು. ನೂತನ ಕಾನೂನು ಸಲಹೆಗಾರರಾಗಿ ದುರ್ಗಾಪ್ರಸಾದ್ ರೈ ಕುಂಬ್ರ ಹಾಗೂ ಗೌರವ ಸಲಹೆಗಾರರಾಗಿ ನಿತೀಶ್ ಕುಮಾರ್ ಶಾಂತಿವನ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಹಾಲಿ ಸಮಿತಿಯನ್ನೇ ಮುಂದುವರಿಸುವುದಾಗಿ ತೀರ್ಮಾನಿಸಲಾಯಿತು. ಗೌರವಾಧ್ಯಕ್ಷರಾಗಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅಧ್ಯಕ್ಷರಾಗಿ ಅಶ್ರಫ್ ಸಾರೆಪುಣಿ, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಮಡಿವಾಳ ಹಾಗೂ ಕೋಶಾಧಿಕಾರಿಯಾಗಿ ಶ್ರೀನಿವಾಸ ಮುಡಾಲ ಪುನರಾಯ್ಕೆಯಾದರು.
ಉಪಾಧ್ಯಕ್ಷರಾಗಿ ಸುಧಾಕರ ಪಾಟಾಳಿ, ಜೊತೆ ಕಾರ್ಯದರ್ಶಿಗಳಾಗಿ ಶಂಸುದ್ದಿನ್ ಗಟ್ಟಮನೆ, ಹಸೈನಾರ್ ಜಾರತ್ತಾರ್ ಪುನರಾಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸುಂದರ ಗೌಡ, ಲೋಕೇಶ್ ರೈ ಅಮೈ, ತಾಜುದ್ದೀನ್ ಸಾರೆಪುಣಿ, ಬಶೀರ್ ಕಡ್ತಿಮಾರ್, ಸತೀಶ್ ಡಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸುರೇಶ್ ಸುಶಾ ಅವರು ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿದರು. ಅಶ್ರಫ್ ಸಾರೆಪುಣಿ ಸ್ವಾಗತಿಸಿದರು. ಅಶೋಕ್ ಬಡಕ್ಕೋಡಿ ವಂದಿಸಿದರು. ಸತೀಶ್ ಡಿ ಕಾರ್ಯಕ್ರಮ ನಿರೂಪಿಸಿದರು.ನೂತನ ಕಾರ್ಯದರ್ಶಿ ಉದಯ ಮಡಿವಾಳ ವಂದಿಸಿದರು.