ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ನಿಕಟಪೂರ್ವ ಮೊಕ್ತೇಸರ ಪುರುಷೋತ್ತಮ ಪ್ರಭು (80ವ) ಅ.7ರಂದು ನಿಧನರಾದರು.
ಪೆರ್ನಾಜೆ ಶಾಲೆಯ ನಿವೃತ್ತ ಶಿಕ್ಷಕರಾದ ಹೆಚ್ ಪುರುಷೋತ್ತಮ ಪ್ರಭು ಅವರು ಕರ್ವೇಲು ಸಮೀಪದ ಹನಂಗೂರು ಎಂಬಲ್ಲಿ ಮನೆ ಮತ್ತು ಕೃಷಿ ಭೂಮಿ ಖರೀದಿಸಿದ್ದರು. ಬಳಿಕ ಅದನ್ನು ಮಾರಾಟ ಮಾಡಿ ಬನ್ನೂರು ಕೃಷ್ಣನಗರ ಚರ್ಚ್ ಬಳಿ ಜಾಗ ಖರೀದಿಸಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ ಪುಷ್ಪಲತಾ, ಸಂಬಂಧಿಕರಾದ ಸುರೇಶ್ ಪ್ರಭು, ನಮಿತಾ ಪ್ರಭು, ಧೀರಜ್ ಪ್ರಭು, ಸೂರಜ್ ಪ್ರಭು ಅವರನ್ನು ಅಗಲಿದ್ದಾರೆ.
