ಆಲಂಕಾರು: ಕಡಬ ತಾಲೂಕು ಅಲಂಕಾರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸುಮಾರು 5 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ ಆಗಿ ಕೆಲಸ ಮಾಡಿಕೊಂಡಿದ್ದು, ಅಂಗನವಾಡಿಗೆ ಶಿಶು ಅಬಿವೃದ್ದಿ ಇಲಾಖಾ ಮುಖಾಂತರ ದಿನಾಂಕ ಎ.4 ರಂದು Samsung Ultra HD/4K. TV 108 Cm ಟಿ.ವಿ ಯನ್ನು ಒದಗಿಸಿರುತ್ತಾರೆ.
ಅಂಗನವಾಡಿ ಶಿಕ್ಷಕಿ ಸವಿತಾ ಮತ್ತು ಅಂಗನವಾಡಿ ಸಹಾಯಕಿ ಚಂದ್ರಿಕಾರವರು ಅ.6 ರಂದು ರಂದು ಸಂಜೆ 4-00 ಗಂಟೆಗೆ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಿ ಮನೆಗೆ ಹೋಗಿದ್ದು,ಮರುದಿನ ಅ.7 ರಂದು ಬೆಳಿಗ್ಗೆ 09:30 ಗಂಟೆಗೆ ಅಂಗನವಾಡಿ ಸಹಾಯಕಿ ಚಂದ್ರಿಕಾರವರು ಬಂದು ಅಂಗನವಾಡಿ ಕೇಂದ್ರದ ಬಾಗಿಲು ತೆರೆದಾಗ ಅಂಗನವಾಡಿ ಕೇಂದ್ರದ ಹಿಂಬದಿಯ ಬಾಗಿಲನ್ನು ಒಡೆದು ಅಂಗನಾಡಿ ಕೇಂದ್ರದಲ್ಲಿದ್ದ Samsung Ultra HD/4K. TV 108 Cm ಟಿ.ವಿ ಮತ್ತು ಟಿ.ವಿ ರಿಮೋಟ್ ಮತ್ತು Mitsun ಸ್ಟೆಬಿಲೈಸರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು,

ಅ 6 ರಂದು ಸಂಜೆ 04-00 ಗಂಟೆಯಿಂದ ಅ.7 ರಂದು ಬೆಳಿಗ್ಗೆ 09-30 ಗಂಟೆಯ ಮದ್ಯೆ ಅವದಿಯಲ್ಲಿ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಹಿಂಬದಿಯ ಬಾಗಿಲನ್ನು ಒಡೆದು ಅಂಗನವಾಡಿ ಕೇಂದ್ರದಲ್ಲಿದ್ದ Samsung Ultra HD/4K. TV 108 Cm ಟಿ.ವಿ ಮತ್ತು ಟಿ.ವಿ ರಿಮೋಟ್ ,ಅಂದಾಜು ಮೌಲ್ಯ 45000/- ಮತ್ತು Mitsun ಸ್ಟೆಬಿಲೈಸರ್ ಅಂದಾಜು ಮೌಲ್ಯ 2000/- ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
ಕಳವು ಮಾಡಿರುವ ಸೊತ್ತುಗಳ ಅಂದಾಜು ಮೌಲ್ಯರೂ 47,000/. ಆಗಬಹುದು . ಆದುದರಿಂದ ಕಳವು ಆಗಿರುವ ಸೊತ್ತು ಮತ್ತು ಆರೋಪಿತನನ್ನು ಪತ್ತೆ ಮಾಡಿಕೊಡಬೇಕಾಗಿ ಕಡಬ ಪೋಲಿಸರಿಗೆ ಅಂಗನ ಶಿಕ್ಷಕಿ ಸವಿತಾ ರವರು ದೂರು ಸಲ್ಲಿಸಿದ್ದು .ಈ ಬಗ್ಗೆ ಕಡಬ ಅರಕ್ಷಕ ಠಾಣೆಯ ಠಾಣಾಧಿಕಾರಿ ಅಭಿನಂದನ್ ಮತ್ತು ಪೋಲಿಸರು ಹಾಗು ಮಂಗಳೂರಿನ ಬೆರಳಚ್ಚು ತಜ್ಞರು,ಶ್ವಾನದಳದವರು ಸ್ಥಳಕ್ಕೆ ಭೇಟಿ ತನಿಖೆ ನಡೆಸಿದ್ದಾರೆ.