ಯುವತಿಯರು,ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಂತ ಮಳಿಗೆ ಆರಂಭಿಸಿರಿ
20 ದಿನಗಳಲ್ಲಿ ನೀವೂ ಕೂಡ ಅತ್ಯುತ್ತಮ ಮೆಹಂದಿ ಡಿಸೈನರ್ ಗಳಾಗುವ ಅವಕಾಶ
ಪುತ್ತೂರು: ಮಂಗಳೂರಿನ ಬಲ್ಮಠ ನೇತ್ರಾವತಿ ಬಿಲ್ಡಿಂಗ್ ಬಳಿಯಲ್ಲಿರುವಂತಹ ರಚನಾ ಡಿಸೈನರ್ ಸ್ಟುಡಿಯೋ ಇದರ ವತಿಯಿಂದ ಆಸಕ್ತ ಯುವತಿಯರು ಹಾಗೂ ಮಹಿಳೆಯರಿಗೆ ನುರಿತ ತರಬೇತುದಾರರಿಂದ ಕೇವಲ 20 ದಿನಗಳ ಮೆಹಂದಿ ತರಬೇತಿ ಆರಂಭಗೊಳ್ಳಲಿದೆ.
ಅ.13 ರಂದು ಆರಂಭಗೊಳ್ಳಲಿರುವ ತರಬೇತಿಯು ಪ್ರತಿದಿನ ಬೆಳಗ್ಗೆ 10 ರಿಂದ ಅಪರಾಹ್ನ 1 ರ ತನಕ ನಡೆಯಲಿದೆ. ತರಬೇತಿಯಲ್ಲಿ ಪೇಸ್ಟ್ ಆ್ಯಂಡ್ ಕೋನ್ ಮೇಕಿಂಗ್, ಬೇಸಿಕ್ಸ್ ,ಗ್ರೀಡ್ಸ್ , ಪ್ಲೋರಲ್ ,ಕಟ್ ವರ್ಕ್, ಸೀಮಂತದ ಡಿಸೈನ್, ಆನೆ, ನವಿಲು, ಕಲಶ, ವಾದ್ಯ, ಭಾರತೀಯ ಪಾರಂಪರಿಕ ಡಿಸೈನ್, ಬ್ರೈಡಲ್ ಲೇ ಔಟ್, ವರ -ವಧು, ಕ್ಯೂ ಆ್ಯಂಡ್ ಎ ಮತ್ತು ನಿತ್ಯಾಭ್ಯಾಸ ಇವೆಲ್ಲವನ್ನೂ ಒಂದೇ ಸೂರಿನಡಿ ಕಲಿಸಿಕೊಡಲಾಗುವುದೆಂದು ತರಬೇತಿ ಆಯೋಜಕರು ತಿಳಿಸಿದ್ದು, ಇಪ್ಪತ್ತು ದಿನಗಳ ತರಬೇತಿಯಲ್ಲೇ ಆಭ್ಯರ್ಥಿಗಳು ಸ್ವಂತ ಮಳಿಗೆಯನ್ನು ಅಥವಾ ಮನೆಯಿಂದಲೇ ಮೆಹಂದಿ ಸಿಂಗಾರ ಕಾರ್ಯ ಆರಂಭಿಸಲು ಶಕ್ತರಾಗುತ್ತಾರೆ ಎಂದು ತಿಳಿಸಿದ್ದಾರೆ. ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9972275456/7097095069 ಕರೆ ಮಾಡುವಂತೆ ವಿನಂತಿಸಲಾಗಿದೆ.