ಪುರುಷರಕಟ್ಟೆ ಸರಸ್ವತಿ ಶಾಲೆಯಲ್ಲಿ ಶಾರದಾ ಪೂಜೆ ಮತ್ತು ಆಯುಧ ಪೂಜೆ ಕಾರ್ಯಕ್ರಮ

0

ಪುತ್ತೂರು: ಪುರುಷರಕಟ್ಟೆ ಸರಸ್ವತಿ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಆಯುಧ ಪೂಜೆ ಕಾರ್ಯಕ್ರಮಗಳು ಅ.8ರಂದು ಪುರೋಹಿತರಾದ ನಾರಾಯಣ ಐತಾಳ್ ನೇತೃತ್ವದಲ್ಲಿ ನಡೆಯಿತು. ವಿದ್ಯಾರ್ಥಿಗಳ ಭಜನೆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.

ಪುಸ್ತಕ ಪೂಜೆ, ಪುಷ್ಪಾರ್ಚನೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ಜರುಗಿತು. ಶಾಲಾ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ, ಆಡಳಿತಾಧಿಕಾರಿ ಶುಭಾ ಅವಿನಾಶ್ ಉಪಸ್ಥಿತರಿದ್ದರು. ಮುಖ್ಯ ಗುರು ಅಖಿಲಾ, ಶೈಕ್ಷಣಿಕ ಸಂಯೋಜಕರಾದ ದಿವ್ಯಾ, ಲಕ್ಷ್ಮೀ ನಿರ್ವಹಿಸಿದರು. ಹಿರಿಯ ಶಿಕ್ಷಕಿ ಶೈಲಜಾ ಶೆಟ್ಟಿ ಭಜನಾ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here