ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಬೆಳ್ಳಾರೆ ಮೂಲದ ಆರ್.ಕೆ. ಭಟ್ ಆಯ್ಕೆ

0

ಪುತ್ತೂರು: ಬೆಂಗಳೂರಿನಲ್ಲಿರುವ ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಇದರ ನೂತನ ಗೌರವಾಧ್ಯಕ್ಷರಾಗಿ ಬೆಳ್ಳಾರೆ ಮೂಲದ ಯಕ್ಷಗಾನ ಕಲಾ ಪೋಷಕ ಆರ್.ಕೆ.ಭಟ್ ಬೆಳ್ಳಾರೆ ಇವರನ್ನು ಆಯ್ಕೆಮಾಡಲಾಗಿದೆ. ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.


2019ರಲ್ಲಿ ’ಯಕ್ಷಮಿತ್ರರು ಬೆಂಗಳೂರು’ ಯಕ್ಷಗಾನಾಸಕ್ತರ ವಾಟ್ಸಾಪ್ ಗ್ರೂಪ್ ರಚನೆಯಾಗಿತ್ತು. ಬಳಿಕ ಅದರ ಮೂಲಕ ಕಲೆ, ಯಕ್ಷಗಾನ, ತಾಳಮದ್ದಳೆ ಪೋಷಿಸುವ ಸದುದ್ದೇಶದಿಂದ ಬೆಂಗಳೂರಿನಲ್ಲಿ ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಎಂದು 2024 ರಲ್ಲಿ ನೋಂದಣಿಯಾಗಿದೆ. https://www.yakshamitraru.com ಎನ್ನುವ ಸ್ವಂತ ವೆಬ್ ಸೈಟ್ ಹೊಂದಿದ್ದು, ಕಳೆದ ಎರಡು ವರುಷಗಳಿಂದ ಕೀರ್ತಿ ಶೇಷ ಕಲಾವಿದರ ಭಾವಚಿತ್ರ ಇರುವ ಸಾವಿರಕ್ಕೂ ಅಧಿಕ ಕ್ಯಾಲೆಂಡರ್ ಮುದ್ರಿಸಿ ಹಂಚುವ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಟ್ರಸ್ಟ್ ಈಗಾಗಲೇ ಹದಿನೈದಕ್ಕೂ ಹೆಚ್ಚು ಕಾರ್ಯಕ್ರಮ ಪ್ರಾಯೋಜಿಸಿ, “ಶಿಕ್ಷಕರ ದಿನಾಚರಣೆ” ಪ್ರಯುಕ್ತ ಸತತ ಐದು ವರುಷಗಳಿಂದ ಶಿಕ್ಷಕರ / ಕಲಾವಿದರ ಗೌರವಾಭಿನಂದನೆ ಕಾರ್ಯಕ್ರಮ ಸಂಘಟಿಸಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ್ ರಾವ್ ಕೆ ಮತ್ತು ಪುತ್ತೂರು ಕೆಮ್ಮಾಯಿ ಮೂಲದ ಟ್ರಸ್ಟ್ ಕಾರ್ಯದರ್ಶಿ ಶ್ಯಾಮಸೂರ್ಯ ಮುಳಿಗದ್ದೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here