ನೆಲ್ಯಾಡಿ: ಇಲ್ಲಿನ ಬೆಥನಿ-ಕೆರ್ನಡ್ಕ ರಸ್ತೆಯಲ್ಲಿ ಅ.9ರಂದು ರಾತ್ರಿ ಕಾಂಡುಹಂದಿಗಳ ಹಿಂಡು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಬೆಥನಿ ವಿದ್ಯಾಸಂಸ್ಥೆ ಹಿಂಬದಿಯಿಂದಾಗಿ ಕೆರ್ನಡ್ಕ ಮೂಲಕ ಮಾದೇರಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆರ್ನಡ್ಕ ಸಮೀಪ, ಇನ್‌ಫೆಂಟ್ ಜೀಸಸ್ ಚರ್ಚ್‌ನ ಬಳಿ ರಸ್ತೆಯಲ್ಲೇ ಸುಮಾರು 15ಕ್ಕೂ ಹೆಚ್ಚು ಕಾಡುಹಂದಿಗಳು ಓಡಾಟ ನಡೆಸಿರುವುದು ಬೈಕ್ ಸವಾರರ ಕಣ್ಣಿಗೆ ಕಾಣಿಸಿಕೊಂಡಿದೆ. ಈ ಕಾಡುಹಂದಿಗಳ ಹಿಂಡು ರಸ್ತೆ ದಾಟಿ ಕೃಷಿ ತೋಟದ ಕಡೆಗೆ ನುಗ್ಗಿವೆ. ರಾತ್ರಿಯಾಗುತ್ತಿದ್ದಂತೆ ಕಾಡು ಹಂದಿಗಳು ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸುತ್ತಿವೆ ಎಂಬ ದೂರುಗಳು ಕೃಷಿಕರಿಂದ ಕೇಳಿಬರುತ್ತಿದೆ. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಸಾರ್ವಜನಿಕರು ಓಡಾಟ ನಡೆಸುತ್ತಿರುವ ರಸ್ತೆಯಲ್ಲೇ ಕಾಡುಹಂದಿಗಳ ಗುಂಪು ಕಾಣಿಸಿಕೊಂಡಿರುವುದು ಗ್ರಾಮಸ್ಥರು ಹಾಗೂ ದ್ವಿಚಕ್ರ ವಾಹನ ಸವಾರರಲ್ಲಿ ಆತಂಕ ಉಂಟುಮಾಡಿದೆ.
