ಪುತ್ತೂರು ರೋಟರಿ ಕ್ಲಬ್‌ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ರೋಟರಿ ಮಲ್ಟಿ ಸ್ಪೆಶಾಲಿಟಿ ಸ್ಯಾಟಲೈಟ್‌ ಡೆಂಟಲ್‌ ಕ್ಲಿನಿಕ್‌ ಆಯೋಜನೆಯಲ್ಲಿ, ಕೆವಿಜಿ ದಂತ ವೈದ್ಯಕೀಯ ಕಾಲೇಜು ಸುಳ್ಯ ಇದರ ಸಹಯೋಗದೊಂದಿಗೆ 2ನೇ ಉಚಿತ ದಂತ ಚಿಕಿತ್ಸಾ ಶಿಬಿರವು ಅ.13 ಸೋಮವಾರದಂದು ಪುತ್ತೂರಿನಲ್ಲಿ ನಡೆಯಲಿದೆ.

ನಗರದ ಮಹಾವೀರ ವಂಚರ್ಸ್‌ ಕಟ್ಟಡದಲ್ಲಿರುವ ಪುತ್ತೂರು ಪಾಲಿಕ್ಲಿನಿಕ್ ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 3.30ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರಿಂದ ಮತ್ತು ಸಿಬ್ಬಂದಿಗಳಿಂದ ಶಿಬಿರಾರ್ಥಿಗಳಿಗೆ ಉಚಿತ ದಂತ ವೈದ್ಯಕೀಯ ಸೇವೆ ನಡೆಯಲಿದೆ. ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಸೆ.23ರಂದು ನಡೆದ ಮೊದಲ ಶಿಬಿರದಲ್ಲಿ ಸುಮಾರು 45 ಮಂದಿ ಇದರ ಸದುಪಯೋಗವನ್ನು ಪಡೆದಿದ್ದರು. ಪ್ರತೀ ತಿಂಗಳ 2ನೇ ಸೋಮವಾರದಂದು ಶಿಬಿರ ನಡೆಯಲಿದ್ದು, ಅವಶ್ಯಕತೆ ಇರುವವರು ಇದರಲ್ಲಿ ಭಾಗವಹಿಸಬಹುದಾಗಿದೆ.

ಕನಿಷ್ಠ ದರದಲ್ಲಿ ಹಲ್ಲಿನ ಬೇರುಗಳ ಚಿಕಿತ್ಸೆ, ದವಡೆ ಹಲ್ಲು (ಬುದ್ದಿ ಹಲ್ಲು) ಕೀಳುವುದು, ಕೃತಕ ದಂತ ಪಂಕ್ತಿ ಜೋಡಣೆ, ಮಕ್ಕಳ ದಂತ ಚಿಕಿತ್ಸೆ ಸೇರಿದಂತೆ ಇತರ ವಿಶೇಷ ಚಿಕಿತ್ಸಾ ಸೌಲಭ್ಯಗಳು ವಾರದ ಇತರ ದಿನಗಳಲ್ಲಿಯೂ ಇಲ್ಲಿ ಲಭ್ಯವಿದೆ ಎಂದು ರೋಟರಿ ಕ್ಲಬ್‌ ಪುತ್ತೂರು ಇದರ ಅಧ್ಯಕ್ಷ ಡಾ. ಶ್ರೀ ಪ್ರಕಾಶ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here