ಉಪ್ಪಿನಂಗಡಿ: ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ ಉಪ್ಪಿನಂಗಡಿ ವಲಯದ ವಾರ್ಷಿಕ ಮಹಾಸಭೆ ಮತ್ತು ಕ್ರೀಡಾಕೂಟ 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಮೈದಾನದಲ್ಲಿ ನಡೆಯಿತು.

ಹಿರಿಯ ಪ್ರಗತಿಪರ ಕೃಷಿಕ ಪೂವಪ್ಪ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಉಪ್ಪಿನಂಗಡಿ ವಲಯಾಧ್ಯಕ್ಷ ಧರ್ಣಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪುರುಷೋತ್ತಮ ನಾಯ್ಕ್ ಕುದ್ಕೋಳಿ, ರತ್ನಾವತಿ, ಹರೀಶ್ ನಾಯ್ಕ್ ದರ್ಖಾಸು, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಪಾಂಗ್ಲಾಯಿ, ಕರ್ನಾಟಕ ರಾಜ್ಯ ಮರಾಟಿ ಫೆಡರೇಷನ್ ಅಧ್ಯಕ್ಷ ಸುಂದರ್ ನಾಯ್ಕ್ ಐ.ಎಫ್.ಎಸ್., ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರಿ ಮಹಾಮಂಡಳಿಯ ಉಪಾಧ್ಯಕ್ಷ ಮಂಜುನಾಥ್ ನಾಯ್ಕ್ ಎನ್.ಎಸ್., ಶ್ರೀ. ಧ.ಮಂ. ಶಿಕ್ಷಣ ಸಂಸ್ಥೆ ಉಜಿರೆಯ ಮುಖ್ಯ ಗುರು ಬಾಲಕೃಷ್ಣ ನಾಯ್ಕ್ ಮತ್ತು ಕೃಷಿಕ ಬಾಲಕೃಷ್ಣ ನಾಯ್ಕ್ ಹಿರೇಬಂಡಾಡಿ ಉಪಸ್ಥಿತರಿದ್ದರು.
2024-25ನೇ ಸಾಲಿನಲ್ಲಿ ಶೈಕ್ಷಣಿಕವಾಗಿ ಮತ್ತು ಕ್ರೀಡಾ -ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಂದರ್ಭ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ಸಮುದಾಯದ ಮಹಿಳೆಯರು ಹಾಗೂ ಪುರುಷರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಕು.ವರ್ಷ ಮತ್ತು ಬಳಗ ಪ್ರಾರ್ಥಿಸಿದರು. ರತ್ನಾವತಿ ವರದಿ ವಾಚಿಸಿದರು. ವಸಂತಿ ಲೆಕ್ಕಪತ್ರ ಮಂಡಿಸಿದರು. ರೇವತಿ ಸ್ವಾಗತಿಸಿದರು. ಪ್ರದೀಪ್ ವಂದಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಅಧ್ಯಕ್ಷರಾಗಿ ಪುನರಾಯ್ಕೆ
ಸಂಘದ ಉಪಿನಂಗಡಿ ವಲಯದ 2025-26ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭ ರಚಿಸಲಾಯಿತು. ಅಧ್ಯಕ್ಷರಾಗಿ ಎರಡನೇ ಬಾರಿಗೆ ಧರ್ಣಪ್ಪ ನಾಯ್ಕ ಅವರು ಸರ್ವಾನುಮತದಿಂದ ಅವಿರೋಧವಾಗಿ ಪುನರಾಯ್ಕೆಯಾದರು.