ಪುತ್ತೂರು: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಕುಂಬ್ರ ವರ್ತಕರ ಸಂಘದ 21ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಅ.10 ರಂದು ಕೆದಂಬಾಡಿ ಗ್ರಾಮ ಪಂಚಾಯತ್ ಕಛೇರಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ವೈಟಿಂಗ್ ಸೋಫಾವನ್ನು ಕೊಡುಗೆಯಾಗಿ ನೀಡಲಾಯಿತು. ಕುಂಬ್ರ ವರ್ತಕರ ಸಂಘವು 10.10.2೦೦4ರಂದು ಬೆಳಿಗ್ಗೆ ಗಂಟೆ 10.10ಕ್ಕೆ ಅಂದಿನ ತಹಶೀಲ್ದಾರ್ ಮರಿಯಪ್ಪ ಗೌಡರವರು ಉದ್ಘಾಟಿಸಿದ್ದರು. ಸಂಘವು 21ನೇ ವರ್ಷವನ್ನು ಅಚರಿಸುತ್ತಿದ್ದು ಈ ಸವಿನೆನಪಿಗಾಗಿ ಈ ಕೊಡುಗೆಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ನ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯರವರನ್ನು ವರ್ತಕರ ಸಂಘದಿಂದ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ವರ್ತಕರ ಸಂಘದ ಅಧ್ಯಕ್ಷ ಮಹಮ್ಮದ್ ಪಿ.ಕೆ ಕೂಡುರಸ್ತೆ, ಸ್ಥಾಪಕಾಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಉಪಾಧ್ಯಕ್ಷ ಸದಾಶಿವ ಕುಂಬ್ರ, ಕಾರ್ಯದರ್ಶಿ ಭವ್ಯ ರೈ ಹಾಗೂ ಕೆದಂಬಾಡಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
‘ವರ್ತಕರ ಸಂಘದ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕೆದಂಬಾಡಿ ಪಂಚಾಯತ್ ಕಛೇರಿಗೆ ಸೋಫಾ ನೀಡಲಾಗಿದೆ. ಸಂಘವು 21 ವರ್ಷಗಳನ್ನು ಪೂರೈಸಿದ್ದು ಸಂಘದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಯೋಜನೆ ಇದ್ದು ಸರ್ವರ ಸಹಕಾರವನ್ನು ಬಯಸುತ್ತೇವೆ.’
ಪಿ.ಕೆ ಮಹಮ್ಮದ್ ಕೂಡುರಸ್ತೆ,
ಅಧ್ಯಕ್ಷರು ವರ್ತಕರ ಸಂಘ ಕುಂಬ್ರ