ಸುದ್ದಿ ನ್ಯೂಸ್ ಪ್ರಸ್ತುತಪಡಿಸಿದ ‘ಯಶೋದಾ-ಕೃಷ್ಣ-2025’ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

0

ಪುತ್ತೂರು: ಜಗದೋದ್ಧಾರಕ ಶ್ರೀ ಕೃಷ್ಣ ಪರಮಾತ್ಮನ ಜನ್ಮದಿನಾಚರಣೆಯನ್ನು ಈ ವರ್ಷ ಸುದ್ದಿ ನ್ಯೂಸ್ ಜೊತೆಗೆ ಸಂಭ್ರಮಿಸುವುದಕ್ಕಾಗಿ ಸುದ್ದಿ ನ್ಯೂಸ್ ‘ಯಶೋದಾ ಕೃಷ್ಣ-2025’ ವಿಡಿಯೋ ಸ್ಪರ್ಧೆಯನ್ನು ಪ್ರಸ್ತುತಪಡಿಸಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸುದ್ದಿ ಮೀಡಿಯಾದ ಸ್ಟುಡಿಯೋದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಸುದ್ದಿ ಮೀಡಿಯಾ ಮಾರ್ಕೆಟಿಂಗ್ ಹೆಡ್ ಕೆ.ಎ ಹಮೀದ್ ಅವರು ಮಾತನಾಡಿ, ಹಿಂದೂ ಧರ್ಮ ಪುರಾಣದಲ್ಲಿ ಯಶೋಧ ಕೃಷ್ಣರ ಕಥೆ ಮೇಲ್ಪಂಕ್ತಿಯಲ್ಲಿ ಇರುವಂತದ್ದು, ದೇವಕಿಯ ಉದರದಲ್ಲಿ ಜನಿಸಿದರೂ ಕೃಷ್ಣನ ಬಾಲ್ಯ, ತುಂಟಾಟಕ್ಕೆ ಸಾಕ್ಷಿಯಾಗಿದ್ದು ನಂದನ ಪತ್ನಿ ಯಶೋಧ. ನೀವು ಯಶೋಧೆಯರಾಗಿ ಮಕ್ಕಳನ್ನು ಕೃಷ್ಣರನ್ನಾಗಿ ಮಾಡಿ ಸಂಭ್ರಮಿಸಿದ್ದೀರಿ. ಶ್ರೀ ಕೃಷ್ಣನಂತೆ ನಿಮ್ಮ ಮಕ್ಕಳಲ್ಲಿಯೂ ಒಳ್ಳೆತನ ಬೆಳೆಯಲಿ, ಸಮಾಜಕ್ಕೆ, ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.


ಇನ್ನೋರ್ವ ಅತಿಥಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ್ ರೈ ಕೋಡಂಬು ಅವರು ಯಶೋದಾ ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ವಿಜೇತರಿಗೆ ಶುಭಹಾರೈಸಿದರು.


1ರಿಂದ 5 ವರ್ಷ ಹಾಗೂ 6ರಿಂದ 10 ವರ್ಷ ವಯೋಮಿತಿಯನ್ನ ನಿಗದಿ ಮಾಡಿ, ‘ಯಶೋದಾ ಕೃಷ್ಣ 2025′ ವಿಡಿಯೋ ಸ್ಪರ್ಧೆ ನಡೆದಿದೆ. ಎರಡು ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಇನ್ಸ್ಟಾ ಗ್ರಾಮ್‌ನಲ್ಲಿ ಅತೀ ಹೆಚ್ಚು ಲೈಕ್ ಹಾಗೂ ತೀರ್ಪುಗಾರರ ಆಯ್ಕೆಯಲ್ಲಿ ಒಟ್ಟು 10 ಜನ ವಿಜೇತರನ್ನು ಘೋಷಣೆ ಮಾಡಲಾಗಿದೆ. ಅತಿಥಿಗಳಾಗಿ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.



ಇನ್ಸ್ಟಾ ಗ್ರಾಮ್‌ ನಲ್ಲಿ ಅತೀ ಹೆಚ್ಚು ಲೈಕ್ (1 ರಿಂದ 5 ವರ್ಷ)ಪಡೆದು ವಿಜೇತರಾದ ಸ್ಪರ್ಧಿಗಳು:
ಪ್ರಥಮ- ಶಕ್ತಿ ಕಶ್ಯಪ್, ಶೃತಿ ಕೆವಿ, ದ್ವಿತೀಯ – ದೇವಾಂಶಿ ಉಣ್ಣಿಕೃಷ್ಣನ್, ಹರ್ಷಿತಾ ಕೆಎನ್

ಇನ್ಸ್ಟಾ ಗ್ರಾಮ್‌ ನಲ್ಲಿ ಅತೀ ಹೆಚ್ಚು ಲೈಕ್ (6 ರಿಂದ 10 ವರ್ಷ) ಪಡೆದು ವಿಜೇತರಾದ ಸ್ಪರ್ಧಿಗಳು:
ಪ್ರಥಮ – ಪ್ರಾಂಶಿ ಜಿ,ಎಸ್ ಕುಲಾಲ್, ಸುಚಿತಾ ಗುರುಪ್ರಸಾದ್, ದ್ವಿತೀಯ- ನಕ್ಷತ್ರ.ಎನ್, ಆಶಾ.ಎನ್

ತೀರ್ಪುಗಾರಾರ ಆಯ್ಕೆಯ ವಿಜೇತರು (1 ರಿಂದ 5 ವರ್ಷ):
ಪ್ರಥಮ – ಪ್ರಣವಿ ಭಾರಧ್ವಜ್, ಅಶ್ವಿನಿ ಡಿ, ದ್ವಿತೀಯ – ಕಿಯಾರ,ಜಯ ಸುವರ್ಣ, ತೃತೀಯ ಸ್ಧಾನ – ದಕ್ಷಿ, ಪ್ರಿಯ ಶ್ರೀ

ತೀರ್ಪುಗಾರಾರ ಆಯ್ಕೆಯ ವಿಜೇತರು (6 ರಿಂದ 10 ವರ್ಷ)
ಪ್ರಥಮ – ನಕ್ಷತ್ರ.ಎನ್, ಆಶಾ.ಎನ್, ದ್ವಿತೀಯ – ಆದಿತ್ಯ ಸೋಮಯಾಜಿ , ತೃತೀಯ – ಮನ್ವಿ ಆಚಾರ್ಯ, ಕಾವ್ಯ ಕೃಷ್ಣ ಪ್ರಸಾದ್

ಯಶೋಧ ಕೃಷ್ಣ 2025ರ ಸ್ಪರ್ಧಿಗಳ ಆಯ್ಕೆಗೆ ತೀರ್ಪುಗಾರರಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರು ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರ.ದ ನಿರ್ದೇಶಕರಾದ ಡಾ.ವಿಜಯ ಸರಸ್ವತಿ, ವಿವೇಕಾನಂದ ಬಿ.ಎಡ್.ಕಾಲೇಜಿನ ಪ್ರಾಂಶುಪಾಲೆ ಡಾ.ಶೋಭಿತಾ ಸತೀಶ್, ಸುದ್ದಿ ಬೆಳ್ತಂಗಡಿ ಚಾನಲ್‌ನ ಸಿಇಒ ಸಿಂಚನಾ ಉರುಬೈಲು ಸಹಕರಿಸಿದ್ದರು.


ʼಯಶೋಧ ಕೃಷ್ಣ- 2025ʼ ಕಾರ್ಯಕ್ರಮದ ಪ್ರಾಯೋಜಕರಾಗಿ ಅಕ್ಷಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.) ಸಂಪ್ಯ ಪುತ್ತೂರು, ರಾಧಾ’ಸ್ ಸಿಲ್ಕ್ಸ್‌ ಟೆಕ್ಸ್‌ಟೈಲ್ ರೆಡಿಮೇಡ್ ಕೋರ್ಟ್ ರಸ್ತೆ ಪುತ್ತೂರು, ಡ್ರೀಮ್ ಹೆವೆನ್ ಕೇಕ್ & ಕೆಫೆ ಉಪ್ಪಿನಂಗಡಿ, ಪಶುಪತಿ ಲೈಟ್ಸ್, ಫ್ಯಾನ್ಸ್ ಎಲೆಕ್ಟಿಕಲ್ಸ್ ಹಾಗೂ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನಿಚರ್ಸ್ ಸಂಸ್ಧೆಗಳು ಕೈ ಜೋಡಿಸಿ ಸಹಕರಿಸಿದ್ದಾರೆ. ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿಜೇತ ಸ್ಪರ್ಧಿಗಳ ಮನೆಮಂದಿ ಹಾಗೂ ಸುದ್ದಿ ಮೀಡಿಯಾ ಸಿಬ್ಬಂದಿಗಳು ಉಪಸ್ಧಿತರಿದ್ದರು.

LEAVE A REPLY

Please enter your comment!
Please enter your name here