ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಸುಮಿತ್ರ ಪಡೀಲುರವರಿಗೆ ಶ್ರದ್ಧಾಂಜಲಿ : ನುಡಿನಮನ

0

ಸುಮಿತ್ರ ಪಡೀಲು ಆದರ್ಶ ಮಹಿಳೆ- ನಿತ್ಯಾನಂದ ಭಟ್ ಕಲ್ಲಡ್ಕ

ಪುತ್ತೂರು: ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕಿ ಮತ್ತು ಅಶ್ವಿನಿ ಕ್ರೆಡಿಟ್ ಮತ್ತು ಇನ್‌ವೆಸ್ಟ್‌ಮೆಂಟ್ ಸರ್ವಿಸಸ್ ಇದರ ಗೌರವ ಸಲಹೆಗಾರರಾದ ಸುಮಿತ್ರ ಪಡೀಲು ರವರು ಸೆ.28 ರಂದು ನಿಧನರಾಗಿದ್ದು, ಇವರ ಉತ್ತರಕ್ರಿಯೆಯ ಮಿತ್ರ ಭೋಜನಕೂಟ ಮತ್ತು ಶ್ರದ್ಧಾಂಜಲಿ ಸಲ್ಲಿಸುವ, ನುಡಿನಮನ ಕಾರ್‍ಯಕ್ರಮ ಅ.10ರಂದು ಪುತ್ತೂರು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಜರಗಿತು.

ಸುಮಿತ್ರ ಪಡೀಲು ಆದರ್ಶ ಮಹಿಳೆ- ನಿತ್ಯಾನಂದ ಭಟ್ ಕಲ್ಲಡ್ಕ
ಪುರೋಹಿತರಾದ ನಿತ್ಯಾನಂದ ಭಟ್ ಕಲ್ಲಡ್ಕರವರು ಮಾತನಾಡಿ ಸುಮಿತ್ರ ಪಡೀಲುರವರು ಆದರ್ಶ ಮಹಿಳೆಯಾಗಿ ಕುಟುಂಬ ಮತ್ತು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸಿ, ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು ಎಂದು ನುಡಿನಮನ ಸಲ್ಲಿಸಿದರು.

ಬದುಕಿನಲ್ಲಿ ಸಾರ್ಥಕ ಜೀವನ- ವಸಂತಿ
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ವಸಂತಿರವರು ಮಾತನಾಡಿ ಸುಮಿತ್ರ ಪಡೀಲುರವರು ಸಮಾಜದಲ್ಲಿ ಅಕ್ಕರೆಯಿಂದ ಬದುಕು ಸಾಗಿಸಿದವರು, ಎಲ್ಲರನ್ನು ಗೌರವಿಸುವ ದೊಡ್ಡ ಗುಣ ಸುಮಿತ್ರ ಅವರಲ್ಲಿ ಇತ್ತು. ಬದುಕಿನಲ್ಲಿ ಸಾರ್ಥಕ ಜೀವನ ಸಾಗಿಸಿದ್ದಾರೆ ಎಂದು ಹೇಳಿದರು.

ಸಮಾಜಕ್ಕೆ ಮಾದರಿ- ವಿವೇಕ್ ಪಡೀಲು
ವಿವೇಕ್ ಪಡೀಲುರವರು ಮಾತನಾಡಿ ಸರಳ-ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಸುಮಿತ್ರರವರ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದರು.


ಸುಮಿತ್ರ ಪಡೀಲುರವರ ಪುತ್ರ ಹರೀಶ್ ಪಡೀಲು ಮತ್ತು ಮನೆಯವರು ಹಾಗೂ ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ನಿತ್ಯನಿಧಿ ಸಂಗ್ರಾಹಕರು, ಅಶ್ವಿನಿ ಕ್ರೆಡಿಟ್ ಮತ್ತು ಇನ್‌ವೆಸ್ಟ್‌ಮೆಂಟ್ ಸರ್ವಿಸಸ್ ಇದರ ಮಾಲಕರು ಮತ್ತು ಸಿಬ್ಬಂದಿವರ್ಗ ಹಾಗೂ ನಿತ್ಯನಿಧಿ ಸಂಗ್ರಾಹಕರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು, ಉದ್ಯಮಿಗಳು, ಊರ-ಪರವೂರ ಹಿತೈಷಿಗಳು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here