ಪೆರ್ಲಂಪಾಡಿ: ಕೊಳ್ತಿಗೆ ವರ್ತಕರ ಸಂಘದ  ಮಹಾಸಭೆ

0

ಪುತ್ತೂರು: ವರ್ತಕರ ಸಂಘ, ಕೊಳ್ತಿಗೆ ಇದರ ಮಹಾಸಭೆಯು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ವರ್ತಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ವಾರ್ಷಿಕ ಮಹಾಸಭೆಯಲ್ಲಿ ಮೆಸ್ಕಾಂ ಇಲಾಖೆಯ ಕುಂಬ್ರ ವಲಯದ ಕೊಳ್ತಿಗೆ ಗ್ರಾಮದಲ್ಲಿ ಪವರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿರುವ ಮಿಥುನ್ ಬಾಗಲಕೋಟೆ,  ಕಿರಣ್ ಅಲಸಂಡೆಮಜಲು ಅವರನ್ನು ಸನ್ಮಾನಿಸಲಾಯಿತು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಿರಿಜಾ ಕೆ., ಹಿರಿಯ ವರ್ತಕರಾದ ಹಾಜಿ ಉಮ್ಮರ್, ಸಂಜೀವ ಗೌಡ ಇವರು ಸನ್ಮಾನಿತರನ್ನು ಶಾಲು ಹೊದಿಸಿ ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು.

ಮಹಾಸಭೆಯ ವಾರ್ಷಿಕ ವರದಿಯನ್ನು ಮೋಹನ್ ಆಳ್ವ, ವಾಚಿಸಿದರು. ಸನ್ಮಾನ ಪತ್ರವನ್ನು ವೆಂಕಟ್ರಮಣ ಪಿ, ಧನಂಜಯ ರೈ ಓದಿದರು. 

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ, ವರ್ತಕರ ಸಂಘದ ಕೋಶಾಧಿಕಾರಿ ಪುರುಷೋತ್ತಮ ಉಪಸ್ಥಿತರಿದ್ದರು. ರೋಹಿಣಿ  ಪ್ರಾರ್ಥಿಸಿದರು. ರವಿಪ್ರಸಾದ್ ಸ್ವಾಗತಿಸಿದರು. ಪ್ರವೀಣ್ ಜಿ.ಕೆ ವಂದಿಸಿದರು. ಪ್ರಭಾಕರ ರೈ ಕೊರಂಬಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here