ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ ತಾಲೂಕು ಮಟ್ಟದಲ್ಲಿ ಕಳೆದ 12ವರ್ಷಗಳಿಂದ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ರನ್ನರ್ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ ಪಡೆಯುವುದರ ಮೂಲಕ ವಾಲಿಬಾಲ್ ನಲ್ಲಿ ನಿರಂತರವಾಗಿ ಈ ಸಾಧನೆಯನ್ನು ತೋರಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ತಂಡದ ನಾಯಕಿಯಾಗಿ ಪಂಚಮಿ, ವರ್ಷಾ ಬಿ, ವಿನುತಾ ಬಿ, ರಕ್ಷಾ, ಆಶಿಕಾ, ಪುಣ್ಯಶ್ರೀ, ವರ್ಷಿಣಿ ಆಡಿದ್ದರು. ವಿಭಾಗ ಮಟ್ಟಕ್ಕೆ ಆಯ್ಕೆ ಪಡೆದ ದೇರ್ಲ ಲೀಲಾವತಿ ಬಿ ಶ್ರೀಧರ ಗೌಡ ದಂಪತಿಗಳ ಪುತ್ರಿ ವರ್ಷಾ ಬಿ, ಬಳ್ಳಿಕಾನ ವಿಶ್ವನಾಥ ನಾಯ್ಕ ಸುಲೋಚನಾ ದಂಪತಿಗಳ ಪುತ್ರಿ ವಿನುತಾ ಬಿ, ಬೆರ್ನಾಂತಿ ಸತೀಶ್ ಪುಷ್ಪಾವತಿ ದಂಪತಿಗಳ ಪುತ್ರಿ ಆಶಿಕಾ, ಮಾಧವ ಶಾಂತಿ ದಂಪತಿಗಳ ಪುತ್ರಿ ಪುಣ್ಯಶ್ರೀ ವಿಭಾಗ ಮಟ್ಟಕ್ಕೆ ಆಯ್ಕೆ ಪಡೆದಿದ್ದಾರೆ. ಇವರಿಗೆ ಶಾಲಾ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಮುಖ್ಯ ಶಿಕ್ಷಕ ಮೋನಪ್ಪ ಬಿ ಇವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ತರಬೇತಿ ನೀಡಿರುತ್ತಾರೆ.