ಅಕ್ಟೋಬರ್ 13 : ಅಂಬಿಕಾ ಆವರಣಕ್ಕೆ ಆಚಾರ್ಯ ಕೆ.ಆರ್.ಮನೋಜ್ ಜಿ ಆಗಮನ

0

ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ನೂತನ ಅಂತಸ್ತು, ವ್ಯಾಯಾಮಶಾಲೆ, ಸಭಾಂಗಣದ ಉದ್ಘಾಟನೆ


ಪುತ್ತೂರು: ಮತಾಂತರಗೊಂಡಿದ್ದ ಸುಮಾರು ಎಂಟುಸಾವಿರಕ್ಕೂ ಅಧಿಕ ಹಿಂದೂ ಯುವಕ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಮೂಲಕ ಕೇರಳದ ತಿರುವನಂತಪುರಂನಲ್ಲಿ ಕ್ರಾಂತಿ ಮೂಡಿಸಿರುವ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ಆಚಾರ್ಯ ಕೆ.ಆರ್.ಮನೋಜ್ ಜಿ ಅಕ್ಟೋಬರ್ 13ರಂದು ಪುತ್ತೂರಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ.


ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ವ್ಯವಸ್ಥೆಗೆ ಇಪ್ಪತ್ತೈದು ವರ್ಷ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ವಿದ್ಯಾಲಯಕ್ಕೆ ಹತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ವಿದ್ಯಾಲಯದ ಕಟ್ಟಡದ ನೂತನ ಅಂತಸ್ತು, ವ್ಯಾಯಾಮಶಾಲೆ, ಸಭಾಂಗಣವನ್ನು ಆಚಾರ್ಯ ಮನೋಜ್ ಜಿ ಗಂಟೆಗೆ ಉದ್ಘಾಟಿಸಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತದನಂತರ ಮರಳಿ ಮಾತೃಧರ್ಮಕ್ಕೆ ಆಗಮಿಸಿದ ಆತಿರಾ ಎಸ್. ಅವರು ಬರೆದ ’ನಾನು ಆತಿರಾ’ ಕೃತಿಯ ಕನ್ನಡ ಅನುವಾದ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಸಿಬಿಎಸ್‌ಇ ಸಂಸ್ಥೆಯ ಪಾರಂಪರಿಕ ದಿನಾಚರಣೆಯೂ ನಡೆಯಲಿದೆ.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಸಂಸ್ಥೆಯ ಪ್ರಾಚಾರ್ಯ ಗಣೇಶ ಪ್ರಸಾದ್ ಡಿ.ಎಸ್., ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಕರತಿಕಾರರಾದ ಆತಿರಾ ಎಸ್., ಅನುವಾದಕರಾದ ನಾಗೇಂದ್ರ ಮತ್ತು ಶ್ವೇತಾ ಜಲಗೇರಿ ಉಪಸ್ಥಿತರಿರುವರು.


ಬೆಳಗ್ಗೆ ೯ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು ತದನಂತರ ಆರ್ಷ ವಿದ್ಯಾ ಸಮಾಜದ ತಂಡದವರಿಂದ ನೃತ್ಯ ನಾಟಕ ನಡೆಯಲಿದೆ. ಮತಾಂಧರ ಷಡ್ಯಂತ್ರಗಳನ್ನು ಎದುರಿಸುವ ಬಗೆಗೆ ಈ ನೃತ್ಯ ನಾಟಕ ಮಾಹಿತಿರೂಪದ ಬೆಳಕು ಚೆಲ್ಲಲಿದೆ.


ಆಚಾರ್ಯ ಕೆ.ಆರ್.ಮನೋಜ್ ಜಿ :
ಎಳೆಯ ವಯಸ್ಸಿನಿಂದಲೇ ಯೋಗ, ಆಧ್ಯಾತ್ಮಡೆಗೆ ಆಕರ್ಷಿತರಾಗಿ, ಅವುಗಳ ಬಗೆಗಿನ ಗುರುತರ ಸಿದ್ಧಿಯನ್ನು ಸಾಧಿಸುವ ಮೂಲಕ ಅಸಂಖ್ಯ ಶಿಷ್ಯವೃಂದಕ್ಕೆ ದಿಗ್ದರ್ಶನಗೈದಿದ್ದಾರೆ. ಯೋಗವಿದ್ಯೆ, ಆಧ್ಯಾತ್ಮಿಕ ಶಾಸ್ತ್ರ, ಭಾರತೀಯ ಸಂಸ್ಕೃತಿ ಮೊದಲಾದ ವಿಷಯಗಳಲ್ಲಿ ಪರಿಣತಿ ಹೊಮದಿರುತ್ತಾರೆ. ಸನಾತನ ಆಚಾರ ವಿಚಾರಗಳಿಗೆ ಬಹುದೊಡ್ಡ ಸವಾಲೇ ಆಗಿರುವ ಪ್ರದೇಶದಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ಹುಟ್ಟುಹಾಕಿ ಆಧ್ಯಾತ್ಮಿಕ ಗಾಡಾಂಧಕಾರದ ಮಧ್ಯೆ ಮೂಡಿದ ಭರವಸೆಯ ಬೆಳಕಾಗಿರುವುದಲ್ಲದೆ, ಭಾರತೀಯತೆಯ ರಾಯಭಾರಿ ಎನಿಸಿಕೊಂಡಿದ್ದಾರೆ. ಲವ್ ಜಿಹಾದ್, ಇಂಟಲೆಕ್ಚುವಲ್ ಜಿಹಾದ್, ಲ್ಯಾಂಡ್ ಜಿಹಾದ್, ಮನಿ ಜಿಹಾದ್, ಜಾಬ್ ಜಿಹಾದ್, ನಾರ್ಕಾಟಿಕ್ ಜಿಹಾದ್‌ಗಳೇ ಮೊದಲಾದ ಮತಾಂಧರ ಷಡ್ಯಂತ್ರಗಳಿಗೆ ಸಡ್ಡು ಹೊಡೆಡು ನಿಂತಿರುವುದರ ಜತೆಗೆ ದುಷ್ಕರ್ಮಿಗಳ ಕುಟಿಲೋಪಾಯಗಳ ಕಾರಣದಿಂದ ಚಿತ್ತ ಚಾಂಚಲ್ಯಕ್ಕೊಳಗಾಗಿ ಮತಾಂತರಗೊಂಡ ಸುಮಾರು 8 ಸಾವಿರಕ್ಕೂ ಅಧಿಕ ಹಿಂದೂ ಯುವಕ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದು ಸದ್ದಿಲ್ಲದ ಕ್ರಾಂತಿಯೊಂದರ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಅವೆಷ್ಟೋ ಸಂಖ್ಯೆಯ ಹೆತ್ತವರ ಗೋಳಿನ ಕಥೆಗಳಿಗೆ ಕಿವಿಯಾಗುತ್ತಿದ್ದಾರೆ, ಅವರ ನೆಮ್ಮದಿಗೆ ಕಾರಣರಾಗುತ್ತಿದ್ದಾರೆ.


ತಾವು ಸ್ಥಾಪಿಸಿರುವ ಆರ್ಷ ವಿದ್ಯಾ ಸಮಾಜದ ಮೂಲಕ ಹಿಂದೂ ಪರಂಪರೆಯ ರಕ್ಷಣೆಯ ಕೈಂಕರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅಧ್ಯಯನ, ಅನುಷ್ಠಾನ, ಪ್ರಚಾರಣ, ಅಧ್ಯಾಪನ ಹಾಗೂ ಸಂಸ್ಕರಣ ಎಂಬ ಸನಾತನ ಧರ್ಮದ ಪಂಚಮಹಾಕರ್ತವ್ಯಗಳನ್ನು ಆಚರಣೆಗೆ ತರುವ ಆಧ್ಯಾತ್ಮಿಕ ಶಿಕ್ಷಣದ ಚಳುವಳಿಯನ್ನು ಸಾಧಿಸಿತೋರಿಸುತ್ತಿದ್ದಾರೆ. ಸಹಸ್ರಾರು ಮಂದಿಗೆ ದಾರಿ ದೀವಿಗೆಯಾಗಿಯೆನಿಸಿದ್ದಾರೆ.

LEAVE A REPLY

Please enter your comment!
Please enter your name here