ಅಧ್ಯಕ್ಷರಾಗಿ ಯೂಸುಫ್ ಗೌಸಿಯ ಸಾಜ; ಪ್ರ.ಕಾರ್ಯದರ್ಶಿ ಸುಲೈಮಾನ್ ದೊಡ್ಡಡ್ಕ
ಪುತ್ತೂರು: ಸಾರ್ಯ ಅಲ್ ಅಮಲ್ ಜುಮಾ ಮಸೀದಿ ಜಮಾಅತ್ ಕಮಿಟಿ ಇದರ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಮಹಮೂದುಲ್ ಫೈಝಿ ಓಲೆಮುಂಡೋವು ಅವರ ನೇತೃತ್ವದಲ್ಲಿ ನಡೆಯಿತು. ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಯೂಸುಫ್ ಗೌಸಿಯ ಸಾಜ ಹಾಗೂ ಪ್ರ.ಕಾರ್ಯದರ್ಶಿಯಾಗಿ ಸುಲೈಮಾನ್ ದೊಡ್ಡಡ್ಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಪಾಂಡಿಲ್ತಡ್ಕ, ಯೂಸುಫ್ ಸಾರ್ಯ, ಕೋಶಾಧಿಕಾರಿಯಾಗಿ ಅಬ್ದುಲ್ ಕುಂಞಿ ಬಂಡಸಾಲೆ ಆಯ್ಕೆಯಾದರು. ಸದಸ್ಯರಾಗಿ ಮುಹಮ್ಮದ್ ಹಾಜಿ ಕೋಡಿಯಡ್ಕ, ಅಬ್ದುಲ್ ರಹಿಮಾನ್ ಹಾಜಿ ಭಂಡಸಾಲೆ, ಶರೀಫ್ ಗಾಣದ ಮೂಲೆ, ಅಬ್ದುಲ್ಲ ಡಿ, ಅಬ್ದುಲ್ಲ ಟಿ, ಅಬ್ದುಲ್ ರಹಿಮಾನ್ ಹೆಚ್, ಇಸ್ಮಾಯಿಲ್ ಕೆ, ಜಾಬಿರ್ ಬಿ, ಸುಲೈಮಾನ್ ಪಿ, ಶಾಫಿ ಎಸ್ ಅವರನ್ನು ಆಯ್ಕೆ ಮಾಡಲಾಯಿತು.