ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಇದರ ಆಡಳಿತ ಮಂಡಳಿ ಅಧ್ಯಕ್ಷ/ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಹಾಪ್ ಕಾಮ್ಸ್ ಕಚೇರಿಯಲ್ಲಿ ಅ.11ರಂದು ನಡೆಯಿತು.

ಅಧ್ಯಕ್ಷರಾಗಿ ಮಂಗಳೂರು ಕ್ಷೇತ್ರದಿಂದ ಆಯ್ಕೆಯಾದ ಪ್ರಶಾಂತ್ ಎ ಗಟ್ಟಿ ಬೋಳಿಯಾರು , ಉಪಾಧ್ಯಕ್ಷರಾಗಿ ಪುತ್ತೂರು ಕ್ಷೇತ್ರದಿಂದ ಆಯ್ಕೆಯಾದ ಸಚಿನ್ ಕುಮಾರ್ ಜೈನ್ ಪುಣ್ಚಪ್ಪಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಬ್ಬರೂ ಸಹಕಾರ ಭಾರತಿ ಬೆಂಬಲಿತರಾಗಿದ್ದಾರೆ.
ಪ್ರಶಾಂತ್ ಗಟ್ಟಿ ಅವರು ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷರು ಹಾಗೂ ದ.ಕ.,ಉಡುಪಿ, ಚಿಕ್ಕಮಗಳೂರು ಸಾವಯವ ಒಕ್ಕೂಟದ ನಿರ್ದೇಶಕರಾಗಿದ್ದಾರೆ.
ಸಚಿನ್ ಕುಮಾರ್ ಜೈನ್ ಅವರು ಪುಣ್ಚಪ್ಪಾಡಿ ಗೌರಿಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ,ಮಂಗಳೂರಿನ ಧವಳ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿರ್ದೇಶಕರ ಅವಿರೋಧ ಆಯ್ಕೆ
ಹಾಪ್ ಕಾಮ್ಸ್ ನ ಆಡಳಿತ ಮಂಡಳಿಯ 16 ನಿರ್ದೇಶಕರ ಆಯ್ಕೆಯೂ ಅವಿರೋಧವಾಗಿ ನಡೆದಿತ್ತು. ನಿರ್ದೇಶಕರಾಗಿ ಬಂಟ್ವಾಳ ಕ್ಷೇತ್ರದಿಂದ ಯಶೋಧರ ಶೆಟ್ಟಿ ದಂಡೆ ವಾಮನಪದವು,ಸುಳ್ಯ ಕ್ಷೇತ್ರದಿಂದ ಜಯಪ್ರಕಾಶ ಕೂಜುಗೋಡು, ಬೆಳ್ತಂಗಡಿ ಕ್ಷೇತ್ರದಿಂದ ರತ್ನರಾಜ್ ಬಳೆಂಜ, ಉಡುಪಿ ಕ್ಷೇತ್ರದಿಂದ ಜಯಕುಮಾರ್ ಪರ್ಕಳ, ಕಾರ್ಕಳ ಕ್ಷೇತ್ರದಿಂದ ಹರೀಶ್ ಕಲ್ಯಾ, ಕುಂದಾಪುರ ಕ್ಷೇತ್ರದಿಂದ ಅನಂತ ಪದ್ಮನಾಭ ಕುಂದಬಾರಂದಾಡಿ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸೀತಾರಾಮ ಗಾಣಿಗ ಹಾಲಾಡಿ, ಹಿಂದುಳಿದ ವರ್ಗ ಬಿ ಯಿಂದ ವಿಜಯ ರೈ ಅಜ್ಜಿಬೆಟ್ಟು ಬಂಟ್ವಾಳ, ಪರಿಶಿಷ್ಟ ಜಾತಿ ಸ್ಥಾನದಿಂದ ಚೀಂಪ ಆರೂರು ಉಡುಪಿ, ಪರಿಶಿಷ್ಟ ಪಂಗಡ ಸ್ಥಾನದಿಂದ ಸುಂದರ ನಾಯ್ಕ ಇರ್ವತ್ತೂರು ಬಂಟ್ವಾಳ, ಮಹಿಳಾ ಮೀಸಲು ಸ್ಥಾನದಿಂದ ನಿರ್ಮಲಾ ಮೀಯಾರು ಕಾರ್ಕಳ, ಮಮತಾ
ಶೆಟ್ಟಿ ಗುರುವಾಯನಕೆರೆ, ಬಿ ತರಗತಿ ಸದಸ್ಯ ಸ್ಥಾನದಿಂದ ಸುಭದ್ರ ರಾವ್ ಪೆರ್ಮಂಕಿ ಮಂಗಳೂರು, ಲಕ್ಷ್ಮೀನಾರಾಯಣ ಉಡುಪ ನೈನಾಡು ಬಂಟ್ವಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.