ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಮೃತ್ಯುಂಜಯ ಹೋಮ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಬೆಳಿಗ್ಗೆ ೧೦ರಿಂದ ಪುತ್ತೂರು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್‌ನಿಂದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
ಪುತ್ತೂರು ಮಹಾವೀರ ವೆಂಚರ್‍ಸ್, ಪುತ್ತೂರು ಪಾಲಿಕ್ಲಿನಿಕ್ ಆವರಣದಲ್ಲಿ ಬೆಳಿಗ್ಗೆ ೯.೩೦ರಿಂದ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ
ಬಪಳಿಗೆ ಅಂಬಿಕಾ ಪ.ಪೂ. ವಿದ್ಯಾಲಯದ ೧೦ನೇ ವರ್ಷಾಚರಣೆಯ ಪ್ರಯುಕ್ತ ತಿರುವನಂತಪುರಂನ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಕೆ.ಆರ್. ಮನೋಜ್ ಜಿ. ಯವರಿಂದ ವಿದ್ಯಾಲಯದ ಕಟ್ಟಡದ ನೂತನ ಅಂತಸ್ತು, ಗ್ರಂಥಾಲಯ, ವ್ಯಾಯಾಮಶಾಲೆ, ಸಭಾಂಗಣ ಉದ್ಘಾಟನೆ
ಪುತ್ತೂರು ಪಶು ಆಸ್ಪತ್ರೆಯಲ್ಲಿ ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ ಸಾಕುನಾಯಿಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮ, ಮಾಹಿತಿ ಶಿಬಿರ
ಪರ್ಲಡ ಬಾಲವನ ಬಯಲು ರಂಗಮಂದಿರದಲ್ಲಿ ಸಂಜೆ ೬.೩೦ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಡಾ| ಕೋಟಾ ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು, ಸಹಾಯಕ ಆಯುಕ್ತರ ಕಛೇರಿ ಪುತ್ತೂರು ವತಿಯಿಂದ `ಮೈ ಮನಗಳ ಸುಳಿಯಲ್ಲಿ ನಾಟಕ
ಮಂಗಳೂರು ಬಲ್ಮಠ ನೇತ್ರಾವತಿ ಬಿಲ್ಡಿಂಗ್ ಬಳಿ ರಚನಾ ಡಿಸೈನರ್ ಸ್ಟುಡಿಯೋದಲ್ಲಿ ಬೆಳಿಗ್ಗೆ ೧೦ರಿಂದ ಮೆಹಂದಿ ತರಗತಿಗಳು ಪ್ರಾರಂಭ
ಶುಭಾರಂಭ
ಸುಳ್ಯಪದವು ಬೀರಮೂಲೆ ಆರ್ಕೇಡ್‌ನಲ್ಲಿ ಬೆಳಿಗ್ಗೆ ಅಡಿಕೆ, ರಬ್ಬರ್, ಕಾಡುತ್ಪತ್ತಿಗಳ ಖರೀದಿ ಕೇಂದ್ರ ಅಝ್ಮೀಯ ಎಂಟರ್‌ಪ್ರೈಸಸ್ ಶುಭಾರಂಭ
ವೈಕುಂಠ ಸಮಾರಾಧನೆ
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಮಾರಧಾರಾ ಸಭಾಭವನದಲ್ಲಿ ವೀರಮಂಗಲ-ಕೋಡಿಬೈಲು ಲಕ್ಷ್ಮೀಯವರ ವೈಕುಂಠ ಸಮಾರಾಧನೆ