ಪುತ್ತೂರು: ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದಲ್ಲದೆ ಮನೆಯಲ್ಲಿ ಮಾಡಿಟ್ಟಿದ್ದ ಸಜ್ಜಿಗೆಯನ್ನೂ ತಿಂದು ಹೋದ ಘಟನೆ ಪುತ್ತೂರು ನೆಹರುನಗರ ಸಿಟಿಗುಡ್ಡೆಯಲ್ಲಿ ಅ.12ರ ಹಾಡಹಗಲು ನಡೆದಿದೆ.

ಸಿಟಿಗುಡ್ಡೆ ನಿವಾಸಿ ಮೋಹನ್ ಆಚಾರ್ಯ ಅವರ ಮನೆಯಿಂದ ಸುಮಾರು 3 ಪವನ್ ಚಿನ್ನಾಭರಣ ಕಳವಾಗಿದೆ. ಮೋಹನ್ ಆಚಾರ್ಯ ಮನೆಮಂದಿ ಅ.12ರಂದು ಬೆಳಗ್ಗೆ ಪೊಳಲಿ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದಿಂದ ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿ, ಕಪಾಟಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಮಾಡಿಟ್ಟಿದ್ದ ಸಜ್ಜಿಗೆಯನ್ನೂ ತಿಂದು ಹೋಗಿದ್ದಾರೆಂದು ತಿಳಿದು ಬಂದಿದೆ. ಅ.13ರಂದು ಪೊಲೀಸರು ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.