ಬಡಗನ್ನೂರು: ಪುತ್ತೂರು ಯಕ್ಷಸಾರಥಿ ಯಕ್ಷ ಕಲಾ ಬಳಗದಿಂದ, ಚಂದ್ರಶೇಖರ ಸುಳ್ಯಪದವು ರವರ ನಿರ್ದೇಶನದಲ್ಲಿ ಬೆಂಗಳೂರು ಮಹಾನಗರ ನಾಗಸಂದ್ರದ ಆರ್.ಕೆ ಭಟ್ ರವರ “ಶಬರಿಗಿರಿ”ಯಲ್ಲಿ ದಕ್ಷಯಜ್ಞ ಹಾಗೂ ಶ್ರೀ ಕೃಷ್ಣ ಕಾರುಣ್ಯ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಎರಡು ದಿನಗಳ ಅಮೋಘ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಮತ್ತು ಮುಮ್ಮೇಳದಲ್ಲಿ ಬೆಂಗಳೂರು ಶಬರಿಗಿರಿ ಹೇಮಸ್ವಾತಿ ಕುರಿಯಾಜೆ, ಪೃಥ್ವಿ ಬಡೆಕಿಲ, ಶಿಖಿನ್ ಸಂದೇಶ್ ಭಟ್ ಅವನೀಶ್ ಸಂಪಾಜೆ, ಶ್ರೀಕೃಷ್ಣ ಬಡೆಕಿಲ, ಆದಿತ್ಯ ಉತ್ತಮ್ ಪಡ್ಪು ಸತೀಶ್ ಬೆಟ್ಟoಪಾಡಿ, ಧನುಷ್, ತರುಣ್ ಕೃಷ್ಣ, ಸ್ವಾತಿ ರೆಂಜ, ದೇವಿಕಾ ಕುರಿಯಾಜೆ, ಭವಿಷ್ ಭಂಡಾರಿ ಭಾಗವಹಿಸಿದರು.