ಪುತ್ತೂರು: ಸುಗಮ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾ ಕೇಂದ್ರದಲ್ಲಿ ಕಟೀಲು ಮೇಳದ ಖ್ಯಾತ ಕಲಾವಿದರಾದ ಗಣೇಶ್ ಪಾಲೆಚ್ಚಾರು ನೇತೃತ್ವದಲ್ಲಿ ಯಕ್ಷಗಾನ ನಾಟ್ಯ ತರಗತಿಗಳು ಆರಂಭಗೊಳ್ಳಲಿದೆ.
ಗಾನಸಿರಿಯಲ್ಲಿ ಸುಗಮ ಸಂಗೀತ ಮಾತ್ರವಲ್ಲದೆ ತಬಲಾ, ಡ್ರಾಯಿಂಗ್, ಕೊಳಲು ತರಗತಿಗಳು ಈಗಾಗಲೇ ನಡೆಯುತ್ತಿದ್ದು, ಹೊಸದಾಗಿ ಯಕ್ಷಗಾನ ನಾಟ್ಯ ತರಗತಿಗಳು ಆರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳು ಕೂಡಾ ಆರಂಭಗೊಳ್ಳಲಿದೆ. ಆಸಕ್ತರು ದಾಖಲಾತಿ ಮತ್ತು ಮಾಹಿತಿಗಾಗಿ 9901555893 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
