ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಮತ್ತು ಶಿಕ್ಷಕರಾದ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ವಿಶ್ವ ವಿದ್ಯಾರ್ಥಿಗಳ ದಿನಾಚರಣೆ ಅ.15ರಂದು ನಡೆಯಿತು.
ಕಾರ್ಯಕ್ರಮವನ್ನು ಅತಿಥಿ ಸಿಂಧು ವಿ.ಕೆ ವಿಜ್ಙಾನ ಶಿಕ್ಷಕಿ ಬೆಟ್ಟಂಪಾಡಿ ಇವರು ಉದ್ಘಾಟಿಸಿ, ಕನಸನ್ನು ಕಾಣಬೇಕು ಕಂಡ ಕನಸನ್ನು ಕಾರ್ಯರೂಪಕ್ಕೆ ತರುವಡೆಗೆ ಹೆಜ್ಜೆ ಹಾಕಬೇಕು ಎಂದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ವಿಜ್ಙಾನವು ಬರೀ ಪಠ್ಯ ವಿಷಯವಲ್ಲ, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿಯಾದ ಅಡ್ವಕೇಟ್ ಆಶ್ವಿನ್ ಎಲ್ ಶೆಟ್ಟಿಯವರು ಆದರ್ಶ ವ್ಯಕ್ತಿಗಳ ಆದರ್ಶವನ್ನು ಅಳವಡಿಸಿಕೊಂಡು ಅವರನ್ನು ಮೀರಿ ಬೆಳೆಯಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಲಕ್ಷ್ಮಿ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ವಿಜ್ಙಾನ ಸಂಘದ ಸಂಯೋಜಕಿ ಶಿಕ್ಷಕಿ ಲಿಖಿತ ಎಂ ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕೃಪಾಲಿ, ಮೋಕ್ಷ, ಶ್ವೇಪಾಲಿ ನೆರವೇರಿಸಿದರು, ಸಂವಿಧಾನದ ಪೀಠಿಕೆಯನ್ನು ಕೃಪಾಲಿ, ಮತ್ತು ಸ್ವಾಗತವನ್ನು ಲಿಬಾ ಫಾತಿಮ ಧನ್ಯವಾದವನ್ನು ಎನ್ ಆರ ಇಫಾ, ಆಯಿಷತ್ ಜಸ್ನ ಕಾರ್ಯಕ್ರಮ ನಿರೂಪಿಸಿದರು.