ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ 22ನೇ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ

0

ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಭಾ ಟ್ರಸ್ಟ್ ಗಾಂಧಿನಗರ ಮಂಗಳೂರು ಹಾಗು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮುಂಡೂರು ಘಟಕದ ಸಹಕಾರದೊಂದಿಗೆ ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಮತ್ತು ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಅ.12ರಂದು ಭಕ್ತಕೋಡಿ ಶ್ರೀ ರಾಘವೇಂದ್ರ ಮಠ ಕಲ್ಲಮ ಸಭಾಭವನದಲ್ಲಿ ನಡೆಯಿತು.


ಶಿಬಿರವನ್ನು ಉದ್ಘಾಟಿಸಿದ ಡಾ. ಸೀತಾರಾಮ ಭಟ್ ಅವರು ಮಾತನಾಡಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಖಾಂತರ ಕಳೆದ ಮೂರು ವರ್ಷಗಳಲ್ಲಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಸಮಾಜದಲ್ಲಿ ಯುವಕರಿಗೆ ಪ್ರೇರಣೆಯಾಗಿದೆ ಎಂದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶುಭ ಹಾರೈಸಿದರು. ವೇದಿಕೆ ಯಲ್ಲಿ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್, ಡಾ ಅಪೂರ್ವ ಕೋಟ್ಯಾನ್, ದೇವಾನಂದ, ಪರಮೇಶ್ವರ್ ನಾಯ್ಕ್, ಬಾಲಚಂದ್ರ ಗೌಡ ಕಡ್ಯ, ಡಾ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಸಭೆಯಲ್ಲಿ ಪಂಚಾಯತ್ ಸದಸ್ಯ ರಾದ, ಬಾಲಕೃಷ್ಣ ಪೂಜಾರಿ, ಅಶೋಕ್ ಪುತ್ತಿಲ, ಅರುಣಾ ಅನಿಲ್, ಅನಿಲ್ ಕಣ್ಣರ್ನೋಜಿ, ಧನಂಜಯ ಕಲ್ಲಮ,ಜನಾರ್ದನ ಪೂಜಾರಿ ಪೂಜಾರಿ,ಅವಿನಾಶ್ ಕೇದಾಗೆದಡಿ, ಸದಾಶಿವ ಶೆಟ್ಟಿ, ಸುಧೀರ್ ಶೆಟ್ಟಿ,ಸಂತೋಷ್ ರೈ,ಹರೀಶ್ ನಾಯ್ಕ್ ನೀಲಪ್ಪ ಪೂಜಾರಿ, ಸುಂದರ ನಾಯ್ಕ್. ಪುಷ್ಪ, ಗೀತಾ, ರಮೇಶ್, ಮೋನಪ್ಪ ಗುತ್ತಿನಪಾಲು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು. ಸುಮಾರು 25 ಮಂದಿ ರಕ್ತ ದಾನ ಮಾಡಿದರು ಅಶೋಕ್ ಸ್ವಾಗತಿಸಿ ಅನಿಲ್ ವಂದಿಸಿದರು, ಬಾಲಚಂದ್ರ ಸೊರಕ್ಕೆ ಕಾರ್ಯಕ್ರಮ ನಿರೂಪಿಸಿದರು. ಸುಮಾರು 300 ಕ್ಕಿಂತಲೂ ಹೆಚ್ಚು ಮಂದಿ ಈ ಶಿಬಿರದ ಸದುಪಯೋಗ ಪಡಕೊಂಡರು.

LEAVE A REPLY

Please enter your comment!
Please enter your name here