ಅ.18-20: ಶೈಖುನಾ ಸುರಿಬೈಲ್ ಉಸ್ತಾದ್ ಅವರ 24ನೇ ಆಂಡ್ ನೇರ್ಚೆ – ಸನದುದಾನ ಮಹಾಸಮ್ಮೇಳನ

0

ಪುತ್ತೂರು: ಬಂಟ್ವಾಳ ಸುರಿಬೈಲ್ ದಾರುಲ್ ಅಶ್ ಅರಿಯ ಎಜುಕೇಷನಲ್ ಸೆಂಟರ್ ಇದರ ಶಿಲ್ಪಿ ಶೈಖುನಾ ಸುರಿಬೈಲ್ ಉಸ್ತಾದ್ ಅವರ 24ನೇ ಆಂಡ್ ನೇರ್ಚೆ ಮತ್ತು 3ನೇ ವರ್ಷದ ಅಶ್ ಅರಿ ಸನದುದಾನ ಮಹಾ ಸಮ್ಮೇಳನವು ಅ.18ರಿಂದ 20ರ ತನಕ ನಡೆಯಲಿದೆ ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಅ.18ಕ್ಕೆ ಬೆಳಿಗ್ಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಳಾರ್ ಅವರ ನೇತೃತ್ವದಲ್ಲಿ ಝಿಯಾರತಿನೊಂದಿಗೆ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಸುಲೈಮಾನ್ ಹಾಜಿ ಸಿಂಗಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ತಾಜುಲ್ ಉಲಮಾ ಆಡಿಟೋರಿಯಂ ಅನ್ನು ಸುಲ್ತಾನ್ ಗೋಲ್ಡ್ ಮಂಗಳೂರು ಇದರ ಮಾಲಕ ಅಬ್ದುಲ್ ರವೂಫ್ ಅವರು ಉದ್ಘಾಟಿಸಲಿದ್ದಾರೆ. ಅ.19ಕ್ಕೆ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ, ಸಂಜೆ ರ‍್ಯಾಲಿ, ರಾತ್ರಿ ಜಲಾಲೀಯ ರಾತೀಬ್ ಮತ್ತು ಅತಾವುಲ್ಲಾ ಹಿಮಮಿ ಕುಪ್ಪೆಟ್ಟಿ ಅವರಿಂದ ಪ್ರಭಾಷಣ ನಡೆಯಲಿದೆ.

ಅ.20ಕ್ಕೆ ಸಮಾರೋಪ ಸಮಾರಂಭ ಮತ್ತು ಸನದುದಾನ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಬಶೀರ್ ಹನೀಫಿ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬಪ್ಪಳಿಗೆ, ಸ್ವಾಲಿದ್ ಮುಕ್ವೆ ಮತ್ತು ಕೇಂದ್ರ ಸಮಿತಿ ಸದಸ್ಯ ಅಬ್ಬಾಸ್ ಮುಸ್ಲಿಯಾರ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here