ಪುತ್ತೂರು: ಜೆಸಿಐ ಜೋಡುಮಾರ್ಗ ನೇತ್ರಾವತಿ ಸಂಸ್ಥೆ ಬಂಟ್ವಾಳ ಇದರ ವಲಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ವರ್ಷಂಪ್ರತಿ ಸಾಧಕರೊಬ್ಬರನ್ನು ಆಯ್ಕೆ ಮಾಡಿ ನೀಡಲಾಗುವ ಕಲಾಶ್ರೀ ಪ್ರಶಸ್ತಿ ಗೆ ವಿಂಧ್ಯಾ ಎಸ್. ರೈಯವರು ಪಾತ್ರರಾದರು.

ವಿವಿಧ ಕ್ಷೇತ್ರಗಳಲ್ಲಿನ ತನ್ನ ಸಮಗ್ರ ಸಾಧನೆ ಮತ್ತು ಅನನ್ಯ ಸೇವೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ಜೆ ಸಿ ಐ ವಲಯ 15 ರ ಅಧ್ಯಕ್ಷ ಅಭಿಲಾಷ್ ಬಿ. ಎ ಪ್ರಶಸ್ತಿ ನೀಡಿ ಗೌರವಿಸಿದರು. ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷೆ ಜೆಸಿ ಜೆ.ಎಫ್.ಎಂ ತೃಪ್ತಿ, ವಲಯ ಸಂಯೋಜಕರಾದ ಜೆಸಿ ಜೆ.ಎಫ್.ಡಿ ಗಾಯತ್ರಿ ಲೋಕೇಶ್,ನಿಕಟಪೂರ್ವ ಅಧ್ಯಕ್ಷ ಜೆ. ಸಿ.ಎಂ ಸುಬ್ರಹ್ಮಣ್ಯ ಪೈ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.