ಪುತ್ತೂರು: ಶ್ರೀಕೃಷ್ಣ ಯುವಕ ಮಂಡಲದ 4ನೇ ವರ್ಷದ ಸಾಂಸ್ಕೃತಿಕ ವೈಭವವು ಸುದಾನ ವಸತಿಯುತ ಶಾಲೆ ನೆಹರೂ ನಗರ ಇಲ್ಲಿನ ಎಡ್ವರ್ಡ್ ಹಾಲ್ ಇಲ್ಲಿ ಸುಮಾರು 80 ಪ್ರತಿಭೆಗಳ ವಿವಿಧ ಪ್ರಕಾರದ ಕಲಾ ವೈವಿಧ್ಯವು ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಉದ್ಘಾಟಿಸಿ ಶ್ರೀಕೃಷ್ಣ ಯುವಕ ಮಂಡಲದ ಸದಸ್ಯರು ಕಾರ್ಯಕ್ರಮ ಮಾಡುವುದಲ್ಲದೆ ಹಲವಾರು ಆಸಕ್ತರಿಗೆ ಧನಸಹಾಯ ಹಾಗೂ ತುರ್ತು ಸಂದರ್ಭದಲ್ಲಿ ರಕ್ತ ಕೊಡುವ ಸಹಾಯ ಮಾಡುವ ಮೂಲಕ ಸಮಾಜ ಸೇವೆ ಮಾಡುವುದರಿಂದ ತಮ್ಮದೇ ಕಛೇರಿ ನಡೆಸಲು ಜಾಗದ ಕೊರತೆ ಇರುವುದರಿಂದ ಶಾಸಕರ ಮುಖೇನ ಜಾಗ ಕಲ್ಪಿಸಿಕೊಡುವ ಭರವಸೆ ನೀಡಿದರು.
ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಅಭಿಜಿತ್ ಶೆಟ್ಟಿ ಅಧ್ಯಕ್ಷರು ( ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಿಲ್ಲೆ ಮೈದಾನ), ಶ್ರೀ ರಾಜೇಶ್ ಕೋಟೆ ಬೆಂಗಳೂರು ಹಾಗೂ ಸುದಾನಾ ಶಾಲೆಯ ಸಂಚಾಲಕರಾದ ರೇ | ಫಾ| ವಿಜಯ ಹಾರ್ವಿನ್ ಮತ್ತು ಡಾ| ಶಾಂತಾ ಶ್ರೀ ವಾಸು ನಾಯ್ಕ ದಿನೇಶ್ ಗೌಡ ಮಾಜಿ ನಗರಸಭಾ ಸದಸ್ಯರು ಪ್ರಶಾಂತ್ ಮುರ ಉಪಸ್ಥಿತರಿದ್ದರು. ವೈಷ್ಣವಿ ಎಂ . ಆರ್ ಪ್ರಾರ್ಥಿಸಿದರು. ಅಪೂರ್ವ ಕಾರಂತ್ ಕಾರ್ಯಕ್ರಮವನ್ನು ನಿರೂಪಿಸಿದರು.
